ಕೊಡಗಿನಲ್ಲಿ ಸೋಂಕಿತರ ಸಂಖ್ಯೆ 639ಕ್ಕೆ ಏರಿಕೆ

07/08/2020

ಮಡಿಕೇರಿ ಆ. 7 : ಜಿಲ್ಲೆಯಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆಗೆ 19 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 639ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸೋಮವಾರಪೇಟೆಯ ಗೆಜ್ಜೆಹನಕಾಡುವಿನ 63 ವರ್ಷದ ಮಹಿಳೆ, ಸೋಮವಾರಪೇಟೆಯ ಗೌಡಳ್ಳಿಯ ಆರೋಗ್ಯ ವಸತಿ ಗೃಹದ 54 ವರ್ಷದ ಮಹಿಳಾ ಆರೋಗ್ಯ ಕಾರ್ಯಕರ್ತೆಗೆ ಸೋಂಉ ದೃಢಪಟ್ಟಿದೆ.

ಸೋಮವಾರಪೇಟೆಯ ಕುಶಾಲನಗರದ ತಾವರೆಕೆರೆಯ 58 ವರ್ಷದ ಮಹಿಳೆ, ಸೋಮವಾರಪೇಟೆಯ ರೇಂಜರ್ ಬ್ಲಾಕಿನ 25 ವರ್ಷದ ಇಬ್ಬರು ಪುರುಷರಲ್ಲಿ ಸೋಂಕು ಪತ್ತೆಯಾಗಿದೆ
ಸೋಮವಾರಪೇಟೆ ಸುಂಟಿಕೊಪ್ಪದ ಕೆಇಬಿ ರಸ್ತೆಯ ಅಪ್ಪಾರಂಡ ಎಕ್ಸ್ ಟೆಂಷನ್ ನ 9 ವರ್ಷದ ಬಾಲಕಿ, ವಿರಾಜಪೇಟೆ ಸಿದ್ದಾಪುರದ ಎಂ.ಜಿ ರಸ್ತೆಯ ಜಿಎಂಪಿ ಶಾಲೆ ಬಳಿಯ 48 ವರ್ಷದ ಪುರುಷ. ಸಿದ್ದಾಪುರದ ಅಂಬೇಡ್ಕರ್ ನಗರದ 32 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ವಿರಾಜಪೇಟೆಯ ಚಿಕ್ಕಪೇಟೆಯ 9ನೇ ಬ್ಲಾಕಿನ 22 ವರ್ಷದ ಪುರುಷ. ಸೋಮವಾರಪೇಟೆಯ ಮಾದಾಪುರ ಜಂಬೂರು ಬಾಣೆಯ 77 ವರ್ಷದ ಮಹಿಳೆ ಸೋಮವಾರಪೇಟೆ ಚೆಟ್ಟಳ್ಳಿಯ ಅಭ್ಯಾಲದ 22 ವರ್ಷದ ಮಹಿಳೆ, ಸೋಮವಾರಪೇಟೆ ಶಾಂತಳ್ಳಿ ಬಸವನಕಟ್ಟೆಯ 45 ವರ್ಷದ ಮಹಿಳೆ, ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮುಖಾಂತರ ವಿರಾಜಪೇಟೆಯ ಗೋಣಿಕೊಪ್ಪದ ತಿತಿಮತಿಯ 36 ವರ್ಷದ ಪುರುಷನಿಗೆ ಸೋಂಕು ಪತ್ತೆಯಾಗಿದೆ.
ವಿರಾಜಪೇಟೆಯ ಸುಣ್ಣದಬೀದಿಯ 53 ವರ್ಷದ ಪುರುಷ, ಕುಶಾಲನಗರ ಮುಳ್ಳುಸೋಗೆಯ 61 ವರ್ಷದ ಪುರುಷ, 55 ವರ್ಷದ ಮಹಿಳೆ, 28 ವರ್ಷದ ಮಹಿಳೆ, 21 ವರ್ಷದ ಪುರುಷ, 90 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಒಟ್ಟು 639 ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, 381 ಮಂದಿ ಗುಣಮುಖರಾಗಿದ್ದಾರೆ. 248 ಸಕ್ರಿಯ ಪ್ರಕರಣಗಳಿದ್ದು, 10 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 184 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.