ತುರ್ತು ಸೇವೆಗಾಗಿ ಕೊಡಗು ಯುವ ಜೆಡಿಎಸ್ ಸ್ಪಂದನಾ ತಂಡ ರಚನೆ

08/08/2020

ಮಡಿಕೇರಿ ಆ.8 : ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಗಾಳಿ ಮಳೆಯಿಂದ ಉಂಟಾದ ಹಾನಿ ಪ್ರದೇಶಗಳಿಗೆ ತೆರಳಿ ಜನರಿಗೆ ತರ್ತು ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಯುವ ಜಾತ್ಯತೀತ ಜನತಾದಳದ ವತಿಯಿಂದ “ಯುವ ಜೆಡಿಎಸ್ ಸ್ಪಂದನಾ ತಂಡ”ವನ್ನು ರಚಿಸಲಾಗಿದೆ ಎಂದು ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಸಿ.ಎಲ್.ವಿಶ್ವ ತಿಳಿಸಿದ್ದಾರೆ.
ಯುವ ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ್‍ಸ್ವಾಮಿ ಅವರ ಸೂಚನೆಯಂತೆ ಕೊಡಗು ಜಾತ್ಯಾತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಅವರ ನೇತೃತ್ವದಲ್ಲಿ ಪಕ್ಷದ ಎಲ್ಲಾ ಘಟಕಗಳ ಕಾರ್ಯರ್ತರನ್ನು ಒಳಗೊಂಡ ಐದು ತಂಡಗಳನ್ನು ರಚಿಸಲಾಗಿದ್ದು, ಪ್ರತಿತಂಡದಲ್ಲಿ ತಲಾ ಒಂದು ರ್ಯಾಪ್ಟ್ ಮತ್ತು ಜೀಪು ಇರಲಿದೆ ಎಂದರು.
ತಮ್ಮ ನೇತೃತ್ವದ ತಂಡ ಕುಶಾಲನಗರ ಮತ್ತು ನೆಲ್ಯಹುದಿಕೇರಿ ಭಾಗದಲ್ಲಿ ಕಾರ್ಯನಿರ್ವಹಿಸಲಿದ್ದು, ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಾಶಿರ್ ಅವರ ನೇತೃತ್ವದಲ್ಲಿ ಕೊಣ್ಣಂಗೇರಿ, ಹೊದವಾಡ ಮತ್ತು ಕೊಟ್ಟಮುಡಿ ಭಾಗದಲ್ಲಿ ಕಾರ್ಯಾಚರಣೆ ನಡೆಯಲಿದೆ.
ಯುವ ವಕ್ತಾರ ರವಿಕಿರಣ್ ಅವರ ನೇತೃತ್ವದಲ್ಲ್ಲಿ ಭಾಗಮಂಡಲ, ಮಡಿಕೇರಿ, ಮಕ್ಕಂದೂರು ಭಾಗದಲ್ಲಿ ಹತ್ತು ಮಂದಿಯ ತಂಡ ಕಾರ್ಯನಿರ್ವಹಿಸಲಿದೆ.
ತುರ್ತು ಸೇವೆಯ ಅಗತ್ಯವಿದ್ದಲ್ಲಿ “ಯುವ ಜೆಡಿಎಸ್ ಸ್ಪಂದನಾ ತಂಡ”ವನ್ನು ಸಂಪರ್ಕಿಸಬಹುದಾಗಿದೆ ಎಂದು ವಿಶ್ವ ತಿಳಿಸಿದ್ದಾರೆ. ಮಡಿಕೇರಿ ವಿಭಾಗ ರವಿಕಿರಣ್ -7829971011, ಮೋನಿಷ್-9449414357, ಅಜಿತ್-9880541708, ಲೀಲಾ ಶೇಷಮ್ಮ -99721 67579 ಸಂಪರ್ಕಿಸಬಹುದಾಗಿದೆ.
ಕುಶಾಲನಗರ ವಿಭಾಗ – ಸಿ.ಎಲ್. ವಿಶ್ವ -9481432037, ಜಿನಾಶುದ್ದೀನ್-9008193213, ಶರತ್ ಕುಮಾರ್-9743850920.
ಮೂರ್ನಾಡು ವಿಭಾಗದಲ್ಲಿ ಎಂ.ಎಂ.ಸಾದಿಕ್-9480220020, ಜಾಶಿರ್-9686960288, ಸೈಫ್ ಅಲಿ-8861684872, ಗೌತಮ್-9980864777 ಸಂಪರ್ಕಿಬಹುದಾಗಿದೆ.
ವಿರಾಜಪೇಟೆ ವಿಭಾಗದಲ್ಲಿ ಮಂಜುನಾಥ್ – 9483874810, ಮತೀನ್-9449058877, ಚೆಲುವಂಡ ಗಣಪತಿ -9110206881, ರಂಜನ್ ನಾಯ್ಡು -9480706717, ಸೈಫು ಚಮಿಯಾಲ್-9740326368, ಮಜೀದ್ ಚೋಕಂಡಳ್ಳಿ-9480604594.
ನಾಪೆÇೀಕ್ಲು ವಿಭಾಗ ಇಬ್ರಾಹಿಂ -9663710165, ಮನ್ಸೂರ್ ಅಲಿ- 9880897122, ಹನೀಫ್ -9481338201, ಸೋಮವಾರಪೇಟೆ ಭಾಗಕ್ಕೆ ತ್ರಿಶೂಲ್ – 9480271875, ಶ್ರೀನಿವಾಸ್ ಈರಪ್ಪ – 9986800010 ನ್ನು ಸಂಪರ್ಕಿಸಬಹುದು.