ತಲಕಾವೇರಿಯಲ್ಲಿ ತುರ್ತು ಕಾರ್ಯಾಚರಣೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೂಚನೆ

08/08/2020

ಮಡಿಕೇರಿ ಆ. 8 : ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಾಕೃತಿ ವಿಕೋಪ ಸಂಬಂಧ ಅಧಿಕಾರಿಗಳ ಸಭೆ ನಡೆಸಿದರು.
ನಂತರ ಮಾತನಾಡಿದ ಅವರು, ಪ್ರಾಕೃತಿ ವಿಕೋಪ ಸಂಬಂಧಿಸಿದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಿದರೂ ಸಹ, ಅವಘಡ ಸಂಭವಿಸಿದೆ. ಜನರ ನೋವು, ತೊಳಲಾಟ, ದುಗುಡ ನೋಡಲು ಸಾಧ್ಯವಾಗುತ್ತಿಲ್ಲ ಎಂದರು.
ಬ್ರಹ್ಮಗಿರಿ ಬೆಟ್ಟದಲ್ಲಿ ಭೂ ಕುಸಿತದಿಂದ ಐವರು ಕಾಣೆಯಾಗಿದ್ದು, ಇದು ಸವಾಲಿನ ಕೆಲಸವಾಗಿದೆ. ಇಂದೇ ಕಾರ್ಯಾಚರಣೆಯನ್ನು ಆರಂಭಿಸುವಂತೆ ಲೋಕೋಪಯೋಗಿ ಹಾಗೂ ಜಿ.ಪಂ.ಎಂಜಿನಿಯರ್ ಗಳಿಗೆ ಸೂಚಿಸಿ, ತಲಕಾವೇರಿಗೆ ತೆರಳುವಂತೆ ನಿರ್ದೇಶನ ನೀಡಿದರು.
ಮುಖ್ಯಮಂತ್ರಿಗಳು ಕೂಡ ತಲಕಾವೇರಿ ಬೆಟ್ಟ ಕುಸಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ದೂರವಾಣಿ ಮೂಲಕ ಸ್ಪಷ್ಟ ಸೂಚನೆ ನೀಡಿದ್ದಾರೆ. ಇಂದೇ ಕಾರ್ಯಾಚರಣೆ ಆರಂಭಿಸಬೇಕು. ಯಾವುದೇ ಕಾರಣ ವಿಳಂಭ ಮಾಡಬಾರದು ಎಂದರು. ಪರಿಹಾರ ಕಾರ್ಯವನ್ನು ಆರಂಭಿಸಲೇ ಬೇಕು ಎಂದು ಸಿಎಂ ಅವರು ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ ಎಂದರು.