ಕೊಡಗಿನಲ್ಲಿ 700 ರ ಗಡಿ ದಾಟಿದ ಕೋವಿಡ್ ಸೋಂಕಿತರ ಸಂಖ್ಯೆ : 409 ಮಂದಿ ಗುಣಮುಖ

09/08/2020

ಮಡಿಕೇರಿ ಆ.9 : ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಭಾನುವಾರ 22 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 705 ಆಗಿದೆ. ಆದರೆ ಗುಣಮುಖರಾದವರ ಸಂಖ್ಯೆ 409ಕ್ಕೆ ಹೆಚ್ಚಿರುವುದು ನೆಮ್ಮದಿಯನ್ನು ನೀಡಿದೆ.
ಪ್ರಸ್ತುತ ಜಿಲ್ಲೆಯಲ್ಲಿ 285 ಸಕ್ರಿಯ ಕೊರೊನಾ ಸೋಂಕಿನ ಪ್ರಕರಣಗಳಿದ್ದು, 11 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ಮೆಂಟ್ ವಲಯಗಳ ಸಂಖ್ಯೆ 201 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಭಾನುವಾರ ಬೆಳಗ್ಗೆ 13 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದೆ. ಮಡಿಕೇರಿಯ ಕೃಷಿ ಇಲಾಖೆ ಕಚೇರಿ ಸಮೀಪದ 21 ವರ್ಷದ ಮಹಿಳೆ, ಮಡಿಕೇರಿ ಮಹದೇವಪೇಟೆಯ 69 ವರ್ಷದ ಪುರುಷ ಮತ್ತು 24 ವರ್ಷದ ಮಹಿಳೆ, ಮಡಿಕೇರಿಯ ಆಜಾದ್ ನಗರದ 40 ಮತ್ತು 19 ವರ್ಷದ ಪುರುಷನಲ್ಲಿ, ಕಡಂಗಮರೂರುವಿನ 58 ವರ್ಷದ ಪುರುಷ, ಮಡಿಕೇರಿಯ ಡೈರಿ ಫಾರಂನ ಅಗ್ನಿಶಾಮಕ ಕಚೇರಿ ಸಮೀಪದ 24 ವರ್ಷದ ಪುರುಷನಲ್ಲಿ ಸೋಂಕು ದೃಢ ಪಟ್ಟಿದೆ.
ಸೋಮವಾರಪೇಟೆ ತಾಲ್ಲೂಕಿನ ಚೆಟ್ಟಳ್ಳಿ ಪೆÇನ್ನತ್‍ಮೊಟ್ಟೆಯ 27 ವರ್ಷದ ಪುರುಷ, ಶನಿವಾರಸಂತೆಯ ಗುಂಡೂರಾವ್ ಬಡಾವಣೆಯ 1 ವರ್ಷದ ಗಂಡುಮಗು, ಕುಶಾಲನಗರ ಕೂಡಿಗೆ ಸೇತುವೆ ಬಳಿಯ 64 ವರ್ಷದ ಪುರುಷ ಮತ್ತು 54 ವರ್ಷದ ಮಹಿಳೆ, ಗುಮ್ಮನಕೊಲ್ಲಿಯ ಬಸವೇಶ್ವರ ದೇವಾಲಯ ಹಿಂಭಾಗದ 47 ವರ್ಷದ ಪುರುಷ, ಕುಸುಬೂರಿನ ಬೇಲೂರು ಬಾಣೆಯ 60 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಮಧ್ಯಾಹ್ನ 9 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಶನಿವಾರಸಂತೆಯ ವಿಘ್ನೇಶ್ವರ ಚೌಲ್ಟ್ರಿ ಬಳಿಯ 39 ವರ್ಷದ ಪುರುಷ, ಅಲ್ಲಿನ ರಾಮಮಂದಿರ ಮುಖ್ಯರಸ್ತೆಯ 31 ವರ್ಷದ ಪುರುಷ, ಕುಶಾಲನಗರ ಬೈಚನಹಳ್ಳಿಯ ಆರ್‍ಸಿ ಲೇಔಟ್ ನ 62 ವರ್ಷದ ಪುರುಷ, ಆಲೂರು ಸಿದ್ಧಾಪುರದ 60 ಮತ್ತು 79 ವರ್ಷದ ಮಹಿಳೆ, ಗಣಗೂರುವಿನ 42 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ.
ಮಡಿಕೇರಿ ತಾಲ್ಲೂಕಿನ ನಾಪೆÇೀಕ್ಲುವಿನ ಮುತ್ತಪ್ಪ ದೇವಾಲಯ ಬಳಿಯ 58 ವರ್ಷದ ಪುರುಷ, ಮಡಿಕೇರಿ ಮಹದೇವಪೇಟೆಯ ಗಣಪತಿ ಬೀದಿಯ 5 ವರ್ಷದ ಬಾಲಕಿ, ಕುಂಜಿಲ ಗ್ರಾಮದ 29 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.