ಕೋಳಿಕಾಡು ಗ್ರಾಮಕ್ಕೆ ಭೇಟಿ : ಬೆಳೆ ಮತ್ತು ಸೇತುವೆ ಹಾನಿ ಪರಿಶೀಲಿಸಿದ ಕಂದಾಯ ಸಚಿವರು

09/08/2020

ಮಡಿಕೇರಿ ಆ.9 ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಾಗೂ ಕಂದಾಯ ಸಚಿವ ಆರ್.ಅಶೋಕ್, ಶಾಸಕರಾದ ಕೆ.ಜಿ ಬೋಪಯ್ಯ, ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಹಾಗೂ ಜಿ.ಪಂ.ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್ ಅವರು ಕೋಳಿಕಾಡು ಗ್ರಾಮಕ್ಕೆ ಭಾನುವಾರ ಭೇಟಿ ನೀಡಿ ಪ್ರಕೃತಿ ವಿಕೋಪದಿಂದ ಉಂಟಾಗಿರುವ ಬೆಳೆ ಹಾನಿ ವೀಕ್ಷಿಸಿದರು. ಹಾಗೆಯೇ ಕೋಳಿಕಾಡು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಕೊಚ್ಚಿ ಹೋಗಿರುವುದನ್ನು ವೀಕ್ಷಿಸಿದರು.
ಪ್ರವಾಹದಿಂದಾಗಿ ಭತ್ತ ನಾಟಿ ನಷ್ಟವಾಗಿದೆ, ಹಾಗೆಯೇ ಸೇತುವೆ ಕೊಚ್ಚಿಹೋಗಿದೆ ಎಂದು ಶಾಸಕರಾದ ಕೆ.ಜಿ ಬೋಪಯ್ಯ ಅವರು ಕಂದಾಯ ಸಚಿವರ ಗಮನಕ್ಕೆ ತಂದರು. ಸೇತುವೆಗೆ ಮರದ ದಿಮ್ಮಿಗಳು ಸಿಲುಕಿರುವುದನ್ನು ಗ್ರಾಮಸ್ಥರು ತೆರವು ಮಾಡುತ್ತಿದ್ದ ದೃಶ್ಯ ಕಂಡುಬಂತು.