ಕೊಡಗಿನಲ್ಲಿ 9 ಕೊವೀಡ್ ಸೋಂಕಿತರು ಪತ್ತೆ

10/08/2020

ಮಡಿಕೇರಿ ಆ. 10 : ಜಿಲ್ಲೆಯಲ್ಲಿ ಸೋಮವಾರ 9 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 174ಕ್ಕೆ ಏರಿಕೆಯಾಗಿದೆ.

ಕುಶಾಲನಗರದ ಗೊಂದಿ ಬಸವನಹಳ್ಳಿಯ ಚಿಕ್ಕನ್ನ ಎಕ್ಸ್ ಟೆನ್ ಷನ್ನಿನ 46 ವರ್ಷದ ಪುರುಷ.
ಕುಶಾಲನಗರ ಬಲಮುರಿ ರಸ್ತೆಯ ಮಾರುತಿ ಶಾಲೆ ಬಳಿಯ 28 ವರ್ಷದ ಪುರುಷ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಶನಿವಾರಸಂತೆಯ 60, 36 ವರ್ಷದ ಮಹಿಳೆ, 10 ವರ್ಷದ ಬಾಲಕಿ, 2 ವರ್ಷದ ಬಾಲಕನಿಗೆ.
ಮಡಿಕೇರಿ ಚೈನ್ ಗೇಟ್ ಬಳಿಯ ವಸತಿ ಗೃಹದ 40 ವರ್ಷದ ಪುರುಷ.
ಮಡಿಕೇರಿಯ ಕೆ.ನಿಡುಗಣೆಯ 32 ವರ್ಷದ ಮಹಿಳೆ.
ಮಡಿಕೇರಿ ಮೈತ್ರಿ ಹಾಲ್ ಬಳಿಯ ಪೆÇಲೀಸ್ ವಸತಿ ಗೃಹದ 52 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 714 ಆಗಿದ್ದು, 436 ಮಂದಿ ಗುಣಮುಖರಾಗಿದ್ದಾರೆ. 267 ಸಕ್ರಿಯ ಪ್ರಕರಣಗಳಿದ್ದು, 11 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 202 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.