ಇನ್ನಾದರೂ ಪವಿತ್ರ ಕಾವೇರಿ ಕ್ಷೇತ್ರ ತಲಕಾವೇರಿಯ ಪಾವಿತ್ರ್ಯತೆ ಕಾಪಾಡಿ : ಭಕ್ತರ ಮನವಿ

10/08/2020

ತಲಕಾವೇರಿ ಕ್ಷೇತ್ರದ ಸುತ್ತಾಮುತ್ತಾ ಅಂದರೆ ತಲಕಾವೇರಿಯಿಂದ ಭಾಗಮಂಡಲ ವ್ಯಾಪ್ತಿ ಮಾತ್ರವಲ್ಲದೆ ಇದನ್ನು ಹೊರತುಪಡಿಸಿ ಸುತ್ತಾಮುತ್ತಲ ಕನಿಷ್ಠ ಐದು ಕಿ.ಮಿ ವ್ಯಾಪ್ತಿಯಲ್ಲಿ ಯಾವುದೇ ಹೋಂಸ್ಟೇ, ರೆಸಾರ್ಟ್ ಹಾಗೂ ಇನ್ನಿತರ ಅನಿಷ್ಟ ಚಟುವಟಿಕೆಗಳಿಗೆ ಅವಕಾಶ ಕೊಡದಂತೆ ಕಟ್ಟುನಿಟ್ಟಿನ ಕಾನೂನು ಅಗತ್ಯ.

●ಯುವ ಸಮುದಾಯ ಹೆಚ್ಚಾಗಿ ಅವಲಂಬಿಸಿರುವ ಗೂಗಲ್ ಅಥವಾ ಇನ್ನಿತರ ಸಾಮಾಜಿಕ ಮಾಧ್ಯಮಗಳಲ್ಲಿ ತಲಕಾವೇರಿ ಕ್ಷೇತ್ರವನ್ನು ಪ್ರವಾಸಿತಾಣ ಎಂದು ತೋರಿಸದೆ, ಪುಣ್ಯಕ್ಷೇತ್ರ ಎಂದು ತೋರಿಸುವಂತೆ ಮಾಡಬೇಕು.

●ತಲಕಾವೇರಿಯನ್ನು ಸರಕಾರ ಆದಾಯ ಬರುವ ವ್ಯಾಪಾರ ಹಾಗೂ ವ್ಯವಹಾರ ದೃಷ್ಟಿಯಿಂದ ನೋಡದೆ ಕೇವಲ ಪುಣ್ಯಕ್ಷೇತ್ರವಾಗಿಯೇ ಪರಿಗಣಿಸಬೇಕು.

●ತಲಕಾವೇರಿಗೆ ಬೇಟಿ ನೀಡುವ ಭಕ್ತರು ಕಡ್ಡಾಯವಾಗಿ ವಸ್ತ್ರ ಸಂಹಿತೆ ಪಾಲಿಸಲೇಬೇಕು.

●ಯುವತಿಯರು ಮಿಡ್ಡಿ, ಚಡ್ಡಿ, ಜೀನ್ಸ್ ಹೀಗೆ ಉದ್ರೇಕಗೊಳ್ಳುವ ಬಟ್ಟೆಗಳಲ್ಲಿ ಬಂದರೆ ಅವರಿಗೆ ಅಲ್ಲಿ ಪಂಚೆ ಕೊಡುವ ಬದಲು ಅವರನ್ನು ವಾಪಾಸು ಕಳುಹಿಸಿ. ಕಾರಣ ಅವರಿಗೆ ಮೊದಲೆ ತಿಳುವಳಿಕೆ ಇರಬೇಕು ಇಲ್ಲದಿದ್ದರೆ ಕ್ಷೇತ್ರಕ್ಕೆ ಬರುವುದು ಬೇಡ.

●ತೀರ್ಥೋದ್ಬವ ಸಮಯ ಹೊರತುಪಡಿಸಿ ಬೇರೆ ದಿನ ಬ್ರಹ್ಮಗಿರಿ ಬೆಟ್ಟಕ್ಕೆ ನಿಷೇಧಿಸಬೇಕು.

●ಮೋಜಿಗಾಗಿ ಬರುವ ಪ್ರವಾಸಿಗರಿಗೆ ಇಲ್ಲಿ ನಿಷೇಧ ಹೇರಬೇಕು.

●ತೀರ್ಥೋದ್ಬವ ದಿವಸ ಸ್ಥಳೀಯ ಮೂಲ ನಿವಾಸಿಗಳಿಗೆ ಹೆಚ್ಚಿನ ಆದ್ಯತೆ ಕೊಡಬೇಕು.

●ಅಧಿಕಾರಿಗಳು ಜನಪ್ರತಿನಿಧಿಗಳು ಯಾರೇ ಇರಲಿ ಎಲ್ಲಾರಿಗೂ ತಲಕಾವೇರಿಯಲ್ಲಿ ಒಂದೇ ಕಾನೂನು ಅನ್ವಯವಾಗುವಂತೆ ನೋಡಿಕೊಳ್ಳಬೇಕು.

●ತೀರ್ಥೋದ್ಬವದಂದು ಕೊಡಗಿನ ಸಾಂಪ್ರದಾಯಿಕ ಉಡುಪಿಗೆ ಹೆಚ್ಚಿನ ಗೌರವ ಹಾಗೂ ಮಾನ್ಯತೆಯನ್ನು ನೀಡಬೇಕು.

● ಈ ಹಿಂದೆ ಸತ್ತವರ ಪಿಂಡ ಪ್ರಧಾನಕ್ಕೆ 48 ದಿವಸ ಆಗಬೇಕಿತ್ತು, ಆದರೆ ಇದೀಗ 16 ದಿವಸಕ್ಕೆ ಹೋಗುತ್ತಿದ್ದಾರೆ, ಈ ಬಗ್ಗೆ ‍ಸ್ಪಷ್ಟತೆ ಬೇಕು, ಕನಿಷ್ಠ ಪಕ್ಷ ಒಂದು ತಿಂಗಳಾದರು ಬೇಕಲ್ಲವೆ, ಇಲ್ಲ ಪ್ರಶ್ನೆ ಮೂಲಕ ಇತ್ಯರ್ಥವಾಗಲಿ.

●ಕುಂಡಿಕೆಯಲ್ಲಿ ಯಾವುದೇ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ನೀಡಬಾರದು,

● ಹೊಸ ಕಾಂಕ್ರೀಟ್ ಕಾಮಗಾರಿಗಳಿಗೆ ತಲಕಾವೇರಿಯಲ್ಲಿ ಅವಕಾಶ ನೀಡಬಾರದು, ಇರುವುದನ್ನೆ ಚೆನ್ನಾಗಿ ನಿರ್ವಹಿಸಿದರೆ ಸಾಕು,

●ಕ್ಷೇತ್ರದ ಪಕ್ಕದಲ್ಲಿರುವ ಅಂಗಡಿ ಮಳಿಗೆಗಳನ್ನು ಒಂದಷ್ಟು ದೂರ ಸ್ಥಳಕ್ಕೆ ಸ್ಥಳಾಂತರಿಸಬೇಕು,

●ಕ್ಷೇತ್ರದ ಪಕ್ಕದಲ್ಲೇ ಇರುವ ಶೌಚಾಲಯಗಳನ್ನು ದೂರದ ಸ್ಥಳಕ್ಕೆ ಸ್ಥಳಾಂತರಿಸಬೇಕು,

●ಅಗಸ್ತೇಶ್ವರರು ಸ್ಥಾಪಿಸಿದ ಮರಳಿನ ಲಿಂಗದ ಬಗ್ಗೆ ಸ್ಪಷ್ಟತೆ ಬೇಕು,

■【ಪ್ರವಾಸಿಗರೇ ನಿಮ್ಮಲ್ಲಿ ವಿಶೇಷವಾದ ವಿನಂತಿ ಹಾಗೂ ಎಚ್ಚರಿಕೆ ಕೂಡ…
●ನೀವು ಪ್ರವಾಸಿಗರಾಗಿ ಈ ಕ್ಷೇತ್ರಕ್ಕೆ ಕಾಲಿಡದೆ ಭಕ್ತರಾಗಿ ಬನ್ನಿ.
●ಮದ್ಯಪಾನ ಮಾಂಸಹಾರ ಸೇವನೆ ಹಾಗೂ ಇನ್ನಿತರ ಕೆಟ್ಟ ಅಲೋಚನೆ ಇಟ್ಟುಕೊಂಡು ಕ್ಷೇತ್ರಕ್ಕೆ ಬರಬೇಡಿ.
●ಇದನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ನಿಮ್ಮ ಅಗತ್ಯ ಕೂಡ ನಮಗಿಲ್ಲ.】

■ ವಿಶೇಷ ಸೂಚನೆ:◇ ಸ್ಥಳೀಯರೆ ಇರಲಿ ಅಥವಾ ಪ್ರವಾಸಿಗರೆ ಇರಲಿ ಈ ನಿಯಮ ಪಾಲಿಸದಿದ್ದರೆ ಅವರಿಗೆ ತಲಕಾವೇರಿ ಪ್ರವೇಶ ನಿಷೇಧ ಮಾಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅಗತ್ಯ.
◆ಇದನ್ನು ಒಪ್ಪುವವರು ಕೇವಲ ಲೈಕ್ ಕೊಟ್ಟು ಸುಮ್ಮನಿರುವುದಲ್ಲ. ಕಮೆಂಟ್ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ ಸಂಬಂಧಿಪಟ್ಟವರಿಗೆ ತಲಪುವವರೆಗೂ ಶೇರ್ ಮಾಡಿ ಹಾಗೂ ಸಂಬಂಧಪಟ್ಟವರ ಗಮನಕ್ಕೂ ತನ್ನಿ.
○ಕಾವೇರಿ ನಮ್ಮ ಜೀವ ಹಾಗೂ ಜೀವನ.
ಇನ್ನೊಬ್ಬರಿಗಾಗಿ ನಮ್ಮ ಅಮ್ಮನನ್ನು ಬಿಟ್ಟುಕೊಡುವುದು ಬೇಡ. ಆಕೇಯ ಸ್ಥಾನ ಉಳಿದರೆ ಮಾತ್ರ ನಮ್ಮ ಉಳಿವು. ●ಗಂಗೆ ಚ ಯಮುನೆ ಚೈವ ಗೋದಾವರಿ ಸರಸ್ವತಿ|
ನರ್ಮದೆ ಸಿಂಧುಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು||
ವೇಧಾಮಂತ್ರದಲ್ಲಿ ಸ್ಥಾನಪಡೆದಿರು ಆ ತಾಯಿಗೆ ನಮ್ಮ ನಾಡಿನಲ್ಲಿ ಹೆಚ್ಚಿನ ಗೌರವ ಕೊಡೋಣ.
ಆಕೇಗೆ ಗೌರವ ನೀಡದ ಮಂದಿ ಕೊಡಗಿಗೆ ಕಾಲಿಡುವ ಅಗತ್ಯವಿಲ್ಲ.

■ಕಾವೇರಿ ಭಕ್ತ
✍️ಚಮ್ಮಟೀರ ಪ್ರವೀಣ್ ಉತ್ತಪ್ಪ
?9880967573