ಎಸ್‍ಕೆಎಸ್‍ಎಸ್‍ಎಫ್ ಕೊಡಗು ಜಿಲ್ಲಾ ಸಮಿತಿಯಿಂದ ಆ.15 ರಂದು ‘ಫ್ರೀಡಂ ಸ್ಕ್ವಾರ್’ ಆಚರಣೆ

10/08/2020

ಮಡಿಕೇರಿ ಆ. 10 : ಎಸ್‍ಕೆಎಸ್‍ಎಸ್‍ಎಫ್ ಕೇಂದ್ರ ಸಮಿತಿಯ ನಿರ್ದೇಶನದಂತೆ ಪ್ರತೀ ವರ್ಷ ಆ. 15 ರಂದು ನಡೆಸಿಕೊಂಡು ಬರುವ ‘ಫ್ರೀಡಂ ಸ್ಕ್ವಾರ್’ ಕಾರ್ಯಕ್ರಮವನ್ನು ಈ ಬಾರಿ ಶಾಖಾ ಮಟ್ಟದಲ್ಲಿ ಬೆಳಿಗ್ಗೆ 9:30 ಆಚರಿಸಲು ಎಸ್‍ಕೆಎಸ್‍ಎಸ್‍ಎಫ್ ಕೊಡಗು ಜಿಲ್ಲಾ ಸಮಿತಿ ತೀರ್ಮಾನಿಸಿದೆ.

ಸರ್ಕಾರದ ಎಲ್ಲಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು, “ಸ್ವಾತಂತ್ರ್ಯ ಸರ್ವರಿಗೂ ಸಮಾನವಾಗಲಿ” ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಕ್ರಮ ನಡೆಯಲಿದ್ದು, ಜಮಾಅತ್ ಪದಾಧಿಕಾರಿಗಳು, ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಗಣ್ಯರು ಭಾಗವಹಿಸಲಿದ್ದಾರೆ.

ದೇಶದ ಸ್ವಾತಂತ್ರ್ಯಕ್ಕಾಗಿ ಕೊಡುಗೆ ನೀಡಿದ ಹೋರಾಟಗಾರರ ತ್ಯಾಗ ಸ್ಮರಣೆಯನ್ನು ಯುವ ತಲೆಮಾರಿಗೆ ತಲುಪಿಸುವ ನಿಟ್ಟಿನಲ್ಲಿ ಭಾಷಣಗಳು ನಡೆಯಲಿದೆ.
ಎಲ್ಲಾ ಶಾಖೆಯ ಕಾರ್ಯಕರ್ತರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕಾರ್ಯಕ್ರಮವನ್ನು ಉತ್ತಮ ರೀತಿಯಲ್ಲಿ ಯಶಸ್ವಿಗೊಳಿಸಬೇಕೆಂದು ಎಸ್‍ಕೆಎಸ್‍ಎಸ್‍ಎಫ್ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಎಂ. ತಮ್ಲೀಖ್ ದಾರಿಮಿ, ಕಾರ್ಯದರ್ಶಿ ಶುಯೈಬ್ ಪೈಝಿ ಕೊಳಕೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.