ಹತ್ತನೇ ತರಗತಿ ಫಲಿತಾಂಶ : ಕೊಡಗು ಜಿಲ್ಲೆಗೆ 18 ನೇ ಸ್ಥಾನ

ಮಡಿಕೇರಿ ಆ.10 : ಹತ್ತನೇ ತರಗತಿ ಪರೀಕ್ಷಾ ಫಲಿತಾಂಶದಲ್ಲಿ ಕೊಡಗು ಜಿಲ್ಲೆ 18 ನೇ ಸ್ಥಾನ ಪಡೆದಿದ್ದು, ‘ಬಿ’ ಶ್ರೇಣಿಗೆ ತೃಪ್ತಿ ಪಟ್ಟುಕೊಂಡಿದೆ. ಕಳೆದ ವರ್ಷ 22 ನೇ ಸ್ಥಾನದಲ್ಲಿದ್ದ ಜಿಲ್ಲೆ ಅತಿವೃಷ್ಟಿ ಸಂಕಷ್ಟ ಮತ್ತು ಕೋವಿಡ್ ಗೊಂದಲದ ನಡುವೆಯೂ ಕೊಂಚ ಮುನ್ನಡೆ ಸಾಧಿಸಿದೆ.
ಜಿಲ್ಲೆಯಲ್ಲಿ ಒಟ್ಟು 6,385 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಕುಶಾಲನಗರದ ಫಾತಿಮಾ ಪ್ರೌಢಶಾಲೆಯ ವಿದ್ಯಾರ್ಥಿ ಜಗತ್ ಪೂವಯ್ಯ 625 ಕ್ಕೆ 620 ಅಂಕ, ಸೋಮವಾರಪೇಟೆ ಸಾಂದೀಪನಿ ಶಾಲೆಯ ವಿದ್ಯಾರ್ಥಿನಿ ಗಾನ 618, ಕೂಡಿಗೆ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ ವಿಜಯ ಎಂ.ಡಿ ಹಾಗೂ ಗೋಣಿಕೊಪ್ಪ ಲಯನ್ಸ್ ಶಾಲೆಯ ವಿದ್ಯಾರ್ಥಿನಿ ಕೆ.ಎಸ್.ಅನುಷ 617 ಅಂಕ ಗಳಿಸಿ ಜಿಲ್ಲೆಯಲ್ಲಿ ಹೆಚ್ಚು ಅಂಕ ಗಳಿಸಿದ ಖ್ಯಾತಿಗೆ ಪಾತ್ರರಾಗಿದ್ದಾರೆ.
ವಿರಾಜಪೇಟೆ ತಾಲ್ಲೂಕಿನಲ್ಲಿ ಶೇ.100 ಸಾಧನೆ ಮಾಡಿರುವ ಶಾಲೆಗಳು :: ಮಾಯಮುಡಿ ಸರ್ಕಾರಿ ಶಾಲೆ, ವಿರಾಜಪೇಟೆ ಕಾವೇರಿ ಶಾಲೆ, ಪ್ರಗತಿ ಶಾಲೆ, ಕೂರ್ಗ್ ವ್ಯಾಲಿ ಶಾಲೆ, ಕಲತ್ಮಾಡು ಲಯನ್ಸ್ ಶಾಲೆ, ಅರ್ವತ್ತೊಕ್ಲುವಿನ ಸರ್ವದೈವತಾ, ಶ್ರೀಮಂಗಲದ ಜೆಸಿ, ಟಿ.ಶೆಟ್ಟಿಗೇರಿ ರೂಟ್ಸ್, ಬಿಟ್ಟಂಗಾಲ ರೋಟರಿ, ಅಮ್ಮತ್ತಿ ನೇತಾಜಿ ಶಾಲೆ.
ಕೊಡಗಿನ ಖ್ಯಾತ ವಕೀಲ ಎಂ.ಎ.ನಿರಂಜನ್ ಅವರ ಪುತ್ರ ಎಂ.ಎಸ್.ವಿಹಾನ್ ಎಸ್‍ಎಸ್‍ಎಲ್‍ಸಿ ಯಲ್ಲಿ ರಾಜ್ಯಕ್ಕೆ 4ನೇ ರ್ಯಾಂಕ್ ಪಡೆದಿದ್ದಾನೆ. ಈತ ಮೈಸೂರಿನ ಶ್ರೀರಾಮಕೃಷ್ಣ ವಿದ್ಯಾಶಾಲೆಯ ವಿದ್ಯಾರ್ಥಿಯಾಗಿದ್ದು, 625ಕ್ಕೆ 622 ಅಂಕ ಗಳಿಸಿದ್ದಾನೆ.