ತಲಕಾವೇರಿಯಲ್ಲಿ ಕುಸಿದದ್ದು ಬ್ರಹ್ಮಗಿರಿ ಬೆಟ್ಟವಲ್ಲ ಗಜಗಿರಿ ಬೆಟ್ಟ !

10/08/2020

ಮಡಿಕೇರಿ ಆ.10 : ತಲಕಾವೇರಿ ಬಳಿಯ ಬೆಟ್ಟ ಕುಸಿತ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಬ್ರಹ್ಮಗಿರಿ ಬೆಟ್ಟ ಕುಸಿತ ಎಂಬ ವರದಿಗೆ ಸಂಬಂಧಿಸಿದಂತೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕೆ.ಜಿ.ಬೋಪಯ್ಯ ಅವರು ಈಗ ಭೂಕುಸಿತವಾಗಿರುವುದು ಗಜಗಿರಿ ಬೆಟ್ಟವಾಗಿದ್ದು, ಬ್ರಹ್ಮಗಿರಿ ಬೆಟ್ಟವಲ್ಲ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಮಾತನಾಡಿ ಯಾವುದೇ ಕಾರಣಕ್ಕೂ ಪೂಜೆ ಸ್ಥಗಿತಗೊಳಿಸಬಾರದು. ಸಂಪ್ರದಾಯದಂತೆ ಪೂಜಾ ಕಾರ್ಯಗಳನ್ನು ಕೈಗೊಳ್ಳಬೇಕೆಂದರು.
ನಿಷ್ಕಲ್ಮಶವಾಗಿ, ಶಾಸ್ತ್ರೋಕ್ತವಾಗಿ ಪೂಜೆ ಮಾಡಬೇಕು, ಯಾವುದೇ ಲೋಪ ಉಂಟಾಗದಂತೆ ಎಚ್ಚರ ವಹಿಸಬೇಕು ಎಂದು ಸಚಿವರು ಸಲಹೆ ನೀಡಿದರು. ಭಾಗಮಂಡಲ-ತಲಕಾವೇರಿ ದೇವಾಲಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಇತರರು ಇದ್ದರು.