ಚಿನ್ನ ಮತ್ತು ಬೆಳ್ಳಿ ಬೆಲೆ ಗಗನಕ್ಕೆ

11/08/2020

ನವದೆಹಲಿ ಆ.11: ಕೊರೋನಾ ಸಂಕಷ್ಟದ ಸಮಯದಲ್ಲೂ ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಗಗನಕ್ಕೇರಿದೆ.
ಚಿನ್ನದ ಬೆಲೆಯಲ್ಲಿ 238 ರುಪಾಯಿ ಹೆಚ್ಚಾಗಿದ್ದು 10 ಗ್ರಾಂ ಚಿನ್ನದ ಬೆಲೆ 56,122 ರುಪಾಯಿ ಆಗಿದೆ. ಇದೇ ವೇಳೆ ಬೆಳ್ಳಿ ಬೆಲೆಯಲ್ಲೂ 960 ರುಪಾಯಿ ಹೆಚ್ಚಾಗಿದ್ದು 1 ಕೆಜಿ ಬೆಲೆ 76,520 ರುಪಾಯಿ ಆಗಿದೆ.
ಈ ಹಿಂದಿನ ವಹಿವಾಟಿನ ಪ್ರಕಾರ ಚಿನ್ನದ ದರ 10 ಗ್ರಾಂಗೆ 55,884 ರೂಪಾಯಿ ಇತ್ತು. ಸೋಮವಾರ 75,560 ರೂಪಾಯಿ ಇದ್ದ ಕೆ.ಜಿ ಬೆಳ್ಳಿಯ ದರ 960 ರೂಗಳ ಏರಿಕೆ ಕಂಡಿದ್ದು ಈಗ 76,520 ರೂಪಾಯಿಗಳಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಔನ್ಸ್ ಚಿನ್ನದ ಬೆಲೆ 2,035 ಡಾಲರ್ ಗಳಿದ್ದು, ಬೆಳ್ಳಿಯ ಬೆಲೆ ಒಂದು ಔನ್ಸ್ ಗೆ 28.31 ಅಮೆರಿಕನ್ ಡಾಲರ್ ನಷ್ಟಿದೆ.