ಫೋನ್ ಸ್ಫೋಟಗೊಂಡು 3 ಸಾವು
11/08/2020

ಕರೂರು ಆ.11 : ಜಿಲ್ಲೆಯ ರಾಯನೂರು ಗ್ರಾಮದ ಮನೆಯೊಂದರಲ್ಲಿ ಫೋನ್ ಸ್ಫೋಟಗೊಂಡು ಸಂಭವಿಸಿದ ಬೆಂಕಿ ಅವಘಡದಲ್ಲಿ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಇಂದು ಬೆಳಿಗ್ಗೆ ಮನೆಯಿಂದ ಹೊಗೆ ಬರುತ್ತಿರುವದನ್ನು ನೆÉರೆಹೊರೆಯರು ಗಮನಿಸಿದ ನಂತರ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಸುಟ್ಟುಹೋದ ಫೋನ್ ಅನ್ನು ವಶಪಡಿಸಿಕೊಂಡಿದ್ದು, ಫೋನ್ ಸ್ಫೋಟಿಸಿದ ನಂತರ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಿದ್ದಾರೆ.
ಮೃತರನ್ನು ಪತಿಯಿಂದ ಬೇರ್ಪಟ್ಟಿದ್ದ ಮುತ್ತುಲಕ್ಷ್ಮಿ, ಮೂರು ವರ್ಷದ ಇಬ್ಬರು ಅವಳಿ ಮಕ್ಕಳಾದ ದೀಕ್ಷಿತ್ ಮತ್ತು ರಕ್ಷಿತ್ ಎಂದು ಗುರುತಿಸಲಾಗಿದೆ.
ಮುತ್ತುಲಕ್ಷ್ಮಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಗಾಯಗೊಂಡಿದ್ದ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
