ನಟ ಶೇಖರ್ ಭಂಡಾರಿ ನಿಧನ

August 11, 2020

ಮಂಗಳೂರು ಆ.11 : ಕರಾವಳಿ ಭಾಗದ ಪ್ರಸಿದ್ದ ರಂಗಭೂಮಿ ಕಲಾವಿದ ಶೇಖರ್ ಭಂಡಾರಿ(72) ಕೊರೋನಾ ಸೋಂಕಿನಿಂದಾಗಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕೆಲವು ದಿನಗಳ ಹಿಂದೆ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಭಂಡಾರಿ ಪ್ರಸಿದ್ಧ ಸಿನಿ ನಟ, ಚುಟುಕು ಕವಿಯಾಗಿದ್ದು ಕಾರ್ಕಳ ಮೂಲದವಾರಾಗಿದ್ದಾರೆ. ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿದ್ದ ಭಂಡಾರಿಯವರಿಗೆ 2018 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ತವ ಪ್ರಶಸ್ತಿ ಒಲಿದು ಬಂದಿತ್ತು.
ಶೇಖರ್ ಭಂಡಾರಿ ಕಾರ್ಕಳದ ಬೆಟ್ಟದ ಮನೆಯ ಬಾಬು ಭಂಡಾರಿ ಮತ್ತು ಅಭಯ ಭಂಡಾರಿ ಅವರ ಪುತ್ರರಾಗಿದ್ದು ಶಾಲಾ-ಕಾಲೇಜು ದಿನಗಳಿಂದಲೇ ರಂಗಭೂಮಿಯತ್ತ ಆಕರ್ಷಿತರಾಗಿದ್ದರು.
ವಿಜಯಾ ಬ್ಯಾಂಕ್‍ನಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದ ಭಂಡಾರಿ ಹಲವು ಚಿತ್ರಗಳಲ್ಲಿ ಖಳನಾಯಕನ ಪಾತ್ರದಲ್ಲಿ ಸಹ ಅಭಿನಯಿಸಿದ್ದರು.

error: Content is protected !!