ಹಿಂದೂ ಜಾಗರಣ ವೇದಿಕೆ ಸಂತ್ರಸ್ತರಿಗೆ ಮಾಸ್ಕ್ ವಿತರಣೆ

11/08/2020

ಮಡಿಕೇರಿ ಆ.11 : ಹಿಂದೂ ಜಾಗರಣಾ ವೇದಿಕೆ ವತಿಯಿಂದ ಮಳೆಹಾನಿ ಸಂತ್ರಸ್ತರಿಗೆ ಮಾಸ್ಕ್ ವಿತರಿಸಲಾಯಿತು. ಮಡಿಕೇರಿ ತಾಲ್ಲೂಕು ಕಡಗದಾಳು ಗ್ರಾಮದ ಶ್ರೀ ಬೊಟ್ಲಪ್ಪ ದೇವಸ್ಥಾನದ ಭಾಗದಲ್ಲಿ ಭೂಕುಸಿತದಿಂದ ಆಶ್ರಯವನ್ನು ಪಡೆದಿರುವ ಕಡಗದಾಳು ಪ್ರೌಢಶಾಲೆಯ ಆಶ್ರಯ ಕೇಂದ್ರದಲ್ಲಿ ಇಂದು ಮಾಸ್ಕ್ ಗಳು , ಔಷಧಿ ಮತ್ತು ಸ್ಯಾನಿಟೈಸರ್ ಅನ್ನು ನೀಡಲಾಯಿತು. ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆರೋಗ್ಯ ಕಾರ್ಯಕರ್ತರಿಗೂ ವೇದಿಕೆ ಪ್ರಮುಖರು ಮಾಸ್ಕ್ ವಿತರಿಸಿದರು.