ಕೊಡಗಿನಲ್ಲಿ 19 ಹೊಸ ಪ್ರಕರಣ ಪತ್ತೆ : ಸಕ್ರಿಯ ಪ್ರಕರಣ 279

11/08/2020

ಮಡಿಕೇರಿ ಆ. 11 : ಜಿಲ್ಲೆಯಲ್ಲಿ ಮಂಗಳವಾರ ಮಧ್ಯಾಹ್ನ 2 ಗಂಟೆಯ ವೇಳೆಗೆ 4 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತ ಸಂಖ್ಯೆ 760ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಬೆಳಗ್ಗೆ 15 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದರೆ, ಮಧ್ಯಾಹ್ನ ಮತ್ತೆ 4 ಮಂದಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಒಟ್ಟು 19 ಪ್ರಕರಣಗಳು ದಾಖಲಾದವು.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ನಾಪೋಕ್ಲುವಿನ ಎಮ್ಮೆಮಾಡು ಬಳಿಯ 19 ವರ್ಷದ ಮಹಿಳೆ. ಮಡಿಕೇರಿ ಗದ್ದಿಗೆಯ 35 ವರ್ಷದ ಮಹಿಳೆ.
ಮಡಿಕೇರಿಯ ಆಜಾದ್ ನಗರದ ಅಂಬೇಡ್ಕರ್ ಭವನ ಸಮೀಪದ 30 ವರ್ಷದ ಮಹಿಳೆ. ವಿರಾಜಪೇಟೆಯ ಗೋಣಿಕೊಪ್ಪದ ಕೆಇಬಿ ವಸತಿ ಗೃಹದ 40 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 760 ಆಗಿದ್ದು, 470 ಮಂದಿ ಗುಣಮುಖರಾಗಿದ್ದಾರೆ. 279 ಸಕ್ರಿಯ ಪ್ರಕರಣಗಳಿದ್ದು, 11 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 213 ಆಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Positive blood test result for the new rapidly spreading Coronavirus, originating in Wuhan, China