ಕೊಡಗಿನಲ್ಲಿ ಮೊದಲ ಹತ್ತು ಸ್ಥಾನ ಪಡೆದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಮಾಹಿತಿ

11/08/2020

ಮಡಿಕೇರಿ ಆ. 11 : ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಕೊಡಗು ಜಿಲ್ಲಾ ಹಂತದಲ್ಲಿ ಮೊದಲ ಹತ್ತು ಸ್ಥಾನ ಪಡೆದ ವಿದ್ಯಾರ್ಥಿಗಳ ಮಾಹಿತಿ ಇಲ್ಲಿದೆ.
ಕುಶಾಲನಗರದ ಫಾತಿಮಾ ಪ್ರೌಢಶಾಲೆಯ ವಿದ್ಯಾರ್ಥಿ ಜಗತ್ ಪೂವಯ್ಯ 625 ಕ್ಕೆ 620 ಅಂಕ, ಸೋಮವಾರಪೇಟೆ ಸಾಂದೀಪನಿ ಶಾಲೆಯ ವಿದ್ಯಾರ್ಥಿನಿ ಗಾನ ಹಾಗೂ ಕೂಡಿಗೆ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ ವಿಜಯ ಎಂ.ಡಿ 618, ಕಳತ್ಮಾಡು ಲಯನ್ಸ್ ಶಾಲೆಯ ವಿದ್ಯಾರ್ಥಿನಿ ಕೆ.ಎಸ್.ಅನುಷ ಪೊನ್ನಮ್ಮ 617 ಅಂಕ ಗಳಿಸಿ ಜಿಲ್ಲೆಯಲ್ಲಿ ಹೆಚ್ಚು ಅಂಕ ಗಳಿಸಿದ ಖ್ಯಾತಿಗೆ ಪಾತ್ರರಾಗಿದ್ದಾರೆ.
ಕುಶಾಲನಗರದ ಫಾತಿಮ ಪ್ರೌಢಲೆಯ ವಿದ್ಯಾರ್ಥಿನಿ ಹೆಚ್.ಎಸ್. ಹೃತ್ವಿಕಾ ಹಾಗೂ ಕೊಟ್ಟೂರು ರಾಜರಾಜೇಶ್ವರಿ ಶಾಲೆಯ ಎಂ.ಕೆ. ಶ್ರೀವತ್ಸ 616 ಅಂಕ, ಸಿದ್ಧಾಪುರ ಶ್ರೀಕೃಷ್ಣ ವಿದ್ಯಾಮಂದಿರ ಪೌಢಶಾಲೆಯ ರಷಾ ಶರೀನ್ 615 ಅಂಕ, ಪೊನ್ನಂಪೇಟೆಯ ಸಂತ ಅಂತೋನಿ ಶಾಲೆಯ ಬಿ.ಡಿ. ಲಾಂಚನಾ 614, ಮಡಿಕೇರಿ ಸಂತ ಜೋಸೇಫರ ಪ್ರೌಢಶಾಲೆಯ ಲಿಪಿಕಾ 612 ಅಂಕ ಪಡೆದುಕೊಂಡಿದ್ದಾರೆ.
ವಿರಾಜಪೇಟೆಯ ಕಾವೇರಿ ಪ್ರೌಢಶಾಲೆಯ ಕೆ.ಬಿ. ತೃಶಾ 610, ವಿರಾಜಪೇಟೆಯ ಸಂತ ಅನ್ನಮ್ಮ ಪ್ರೌಢಶಾಲೆಯ ಪಿ.ಎಸ್. ಪಂಚಮಿಗೆ 604, ಮುರ್ನಾಡು ಜ್ಞಾನ ಜ್ಯೋತಿ ಶಾಲೆಯ ಪಿ.ಎ. ಸುನೈನಾ ಹಾಗೂ ಮೂರ್ನಾಡು ಮಾರುತಿ ಪ್ರೌಢಶಾಲೆಯ ವಿದ್ಯಾರ್ಥಿನಿ ಎ.ವಿ. ವೈಷ್ಣವಿಗೆ 603 ಅಂಕ, ಮಡಿಕೇರಿ ಸಂತ ಮೈಕಲರ ಪ್ರೌಢಶಾಲೆಯ ಲಿಯೋನಾ ಜಸ್ಟಾ ಫೆರ್ನಾಂಡಿಸ್ ಹಾಗೂ ಅನುಜ್ಞಾ ಪೂಣಚ್ಚ 601 ಅಂಕವನ್ನು ಗಳಿಸಿದ್ದಾರೆ.