ಸೋಮವಾರಪೇಟೆಯಲ್ಲಿ ಮಳೆಯಿಂದ ಭತ್ತದ ಗದ್ದೆಗೆ ಹಾನಿ

11/08/2020

ಸೋಮವಾರಪೇಟೆ ಆ. 11 : ಶಾಂತಳ್ಳಿ ಹೋಬಳಿಯಲ್ಲಿ ಧಾರಾಕಾರ ಮಳೆಯಾಗಿದ್ದರಿಂದ ಹಲವು ಗದ್ದೆಗಳಲ್ಲಿ ನಾಟಿ ಮಾಡಿದ್ದ ಭತ್ತದ ಪೈರಿಗೆ ಹಾನಿಯಾಗಿದೆ.
ಗ್ರಾಮೀಣ ಭಾಗದಲ್ಲಿ ನದಿ ತೊರೆಗಳು ಉಕ್ಕಿ ಹರಿದು ನಾಟಿ ಮಾಟಿದ ಭತ್ತದ ಗದ್ದೆಗಳಲ್ಲಿ ನೀರು ಆವೃತವಾಗಿ ಗದ್ದೆ ಬದುಗಳು ಒಡೆದು ನಷ್ಟವಾಗಿದೆ. ತೋಳೂರುಶೆಟ್ಟಳ್ಳಿ ಗ್ರಾ.ಪಂ ವ್ಯಾಪ್ತಿಯ ತೋಳೂರುಶೆಟ್ಟಳ್ಳಿ ಗ್ರಾಮದ ಗಣೇಶ್ ಎಂಬುವವರ ಗದ್ದೆಯಲ್ಲಿ ಕೊಲ್ಲಿಯ ನೀರು ಹರಿದು ಗದ್ದೆಯಲ್ಲಿ ಹೂಳು ತುಂಬಿದ್ದು, ನಷ್ಟವಾಗಿದೆ.