ಎಸ್‌ಎಸ್‌ಎಲ್‌ಸಿ ಪರೀಕ್ಷೆ : ಕೊಡಗು ಜಿಲ್ಲೆಗೆ ಶೇ.81 ರಷ್ಟು ಫಲಿತಾಂಶ

August 11, 2020

ಮಡಿಕೇರಿ ಆ.11 : 2019-20ನೇ ಸಾಲಿನಲ್ಲಿ ಕೊಡಗಿನಲ್ಲಿ ಒಟ್ಟು 6499 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿಯಾಗಿದ್ದು, ಇವರಲ್ಲಿ 6255 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 5054 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.81 ಫಲಿತಾಂಶ ಬಂದಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪಿ.ಎಸ್.ಮಚ್ಚಾಡೊ ಅವರು ತಿಳಿಸಿದ್ದಾರೆ.
ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯದಲ್ಲಿ ಕೊಡಗು ಜಿಲ್ಲೆ 18 ನೇ ಸ್ಥಾನ ಪಡೆದಿದೆ. ಗೈರು ಮತ್ತು ಹಾಜರಾತಿ ಕೊರತೆಯಿಂದ 244 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿರುವುದಿಲ್ಲ. ಇಲಾಖೆಯು ನಿಗದಿಪಡಿಸಿರುವ ಹೊಸ ಮಾನದಂಡದ ಪ್ರಕಾರ ಜಿಲ್ಲೆಯ ಫಲಿತಾಂಶ ‘ಬಿ’ ಶ್ರೇಣಿ ಪಡೆದಿದೆ ಎಂದು ಪಿ.ಎಸ್.ಮಚ್ಚಾಡೊ ಅವರು ಹೇಳಿದ್ದಾರೆ.
ತಾಲ್ಲೂಕುವಾರು ಮಾಹಿತಿ ಇಂತಿದೆ. ಮಡಿಕೇರಿ ತಾಲ್ಲೂಕಿನ 43 ಶಾಲೆಗಳಲ್ಲಿ 1808 ವಿದ್ಯಾರ್ಥಿಗಳು ಹಾಜರಾಗಿದ್ದು, 1476 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.81.64 ಫಲಿತಾಂಶ ಬಂದಿದೆ. ಸೋಮವಾರಪೇಟೆ ತಾಲ್ಲೂಕಿನ 64 ಶಾಲೆಗಳ 2482 ವಿದ್ಯಾರ್ಥಿಗಳು ಹಾಜರಾಗಿದ್ದು, 1953 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.78.68 ಫಲಿತಾಂಶ ಬಂದಿದೆ.

ವಿರಾಜಪೇಟೆ ತಾಲ್ಲೂಕಿನ 57 ಶಾಲೆಗಳ 1965 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 1625 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.82.70 ಫಲಿತಾಂಶ ಬಂದಿದೆ.
ಶ್ರೇಣಿವಾರು ಫಲಿತಾಂಶ ವಿವರ :-ಮಡಿಕೇರಿ ತಾಲ್ಲೂಕಿನ 43 ಶಾಲೆಗಳಲ್ಲಿ 22 ಶಾಲೆಗಳು ‘ಎ’ ಶ್ರೇಣಿ, 07 ಶಾಲೆಗಳು ‘ಬಿ’ ಶ್ರೇಣಿ, 14 ಶಾಲೆಗಳು ‘ಸಿ’ ಶ್ರೇಣಿ ಪಡೆದಿವೆ. ಸೋಮವಾರಪೇಟೆ ತಾಲ್ಲೂಕಿನ 64 ಶಾಲೆಗಳಲ್ಲಿ 23 ಶಾಲೆಗಳು ‘ಎ’ ಶ್ರೇಣಿ, 17 ಶಾಲೆಗಳು ‘ಬಿ’ ಶ್ರೇಣಿ, 24 ಶಾಲೆಗಳು ‘ಸಿ’ ಶ್ರೇಣಿ ಪಡೆದಿವೆ. ವಿರಾಜಪೇಟೆ ತಾಲ್ಲೂಕಿನ 57 ಶಾಲೆಗಳಲ್ಲಿ 21 ಶಾಲೆಗಳು ‘ಎ’ ಶ್ರೇಣಿ, 19 ಶಾಲೆಗಳು ‘ಬಿ’ ಶ್ರೇಣಿ, 17 ಶಾಲೆಗಳು ‘ಸಿ’ ಶ್ರೇಣಿ ಪಡೆದಿವೆ.
ಜಿಲ್ಲಾ ಹಂತದಲ್ಲಿ ಮೊದಲ 10 ಸ್ಥಾನ ಪಡೆದ ವಿದ್ಯಾರ್ಥಿಗಳ ಮಾಹಿತಿ:-ಕುಶಾಲನಗರ ಫಾತಿಮಾ ಕಾನ್ವೆಂಟ್‍ನ ಜಗತ್ ಪೂವಯ್ಯ (620), ಸೋಮವಾರಪೇಟೆ ಸಾಂದೀಪನಿ ಪ್ರೌಢ ಶಾಲೆಯ ಗಾನ(618), ಕೂಡಿಗೆ ಮೊರಾರ್ಜಿ ಶಾಲೆಯ ವಿಜಯ್ ಎಂ.ಡಿ(618), ಕಳತ್ಮಾಡು ಲಯನ್ಸ್ ಶಾಲೆಯ ಅನುಷಾ ಪೊನ್ನಮ್ಮ ಕೆ.ಎಸ್ (617), ಕುಶಾಲನಗರ ಫಾತಿಮಾ ಕಾನ್ವೆಂಟ್ ಹೃತ್ವಿಕಾ ಹೆಚ್.ಎಸ್ (616), ಕೊಟ್ಟೂರು ರಾಜರಾಜೇಶ್ವರಿ ಶಾಲೆಯ ಶ್ರೀ ವತ್ಸ ಎಂ.ಕೆ (616), ಸಿದ್ಧಾಪುರ ಶ್ರೀಕೃಷ್ಣ ವಿದ್ಯಾಮಂದಿರದ ರಷಾ ಶರೀನ್ (615) ಅಂಕ ಪಡೆದಿದ್ದಾರೆ.
ಪರೀಕ್ಷೆ ಬರೆಯಲಾಗದ ಮತ್ತು ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ ತಿಂಗಳಿನಲ್ಲಿ ಪೂರಕ ಪರೀಕ್ಷೆಯು ನಡೆಯಲಿದ್ದು ಪರೀಕ್ಷಾ ನೋಂದಣಿ ಮತ್ತು ಮೌಲ್ಯಮಾಪನ ಸಂಬಂಧಿಸಿದ ಮಾಹಿತಿಗೆ ಆಯಾಯ ಪ್ರೌಢಶಾಲೆಯ ಮುಖ್ಯ ಶಿಕ್ಷಕರನ್ನು ಸಂಪರ್ಕಿಸಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಕೋರಿದ್ದಾರೆ.

 

error: Content is protected !!