ಕಾರ್ಯಾಚರಣೆಯಲ್ಲಿ ಕಾಳಜಿ ತೋರಿದ ಉಸ್ತುವಾರಿ ಸಚಿವ ವಿ.ಸೋಮಣ್ಣ

11/08/2020

ಮಡಿಕೇರಿ ಆ.11 : ರಾಜ್ಯ ವಸತಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ವಯಸ್ಸಿನ ಹಂಗು ತೊರೆದು ಕಳೆದ ಐದು ದಿನಗಳಿಂದ ತಲಕಾವೇರಿ ಪ್ರದೇಶದಲ್ಲೇ ಬೀಡು ಬಿಟ್ಟು ಕಾರ್ಯಾಚರಣೆಯ ಮೇಲುಸ್ತುವಾರಿ ವಹಿಸಿಕೊಂಡರು. ಬೆಟ್ಟ ಕುಸಿದ ಕಡಿದಾದ ಪ್ರದೇಶದಲ್ಲಿ ಜಡಿಮಳೆಯ ನಡುವೆ ಸಂಚರಿಸಿ ಕಾರ್ಯಾಚರಣೆಯ ತಂಡಕ್ಕೆ ಅಗತ್ಯ ಸಲಹೆಗಳನ್ನು ನೀಡಿ ಧೈರ್ಯ ತುಂಬಿದರು. ಖುದ್ದು ಊಟ ಬಡಿಸಿ ಮತ್ತು ತಾವೂ ಸಿಬ್ಬಂದಿಗಳೊಂದಿಗೆ ಊಟ ಮಾಡಿ ಪ್ರೋತ್ಸಾಹ ನೀಡಿದರು.
ಸಂಸದ ಪ್ರತಾಪ್ ಸಿಂಹ, ಶಾಸಕ ಕೆ.ಜಿ.ಬೋಪಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಅವರುಗಳು ಕೂಡ ಇಷ್ಟೇ ಕಾಳಜಿಯಿಂದ ಕಾರ್ಯ ನಿರ್ವಹಿಸಿದರು. ಪ್ರತಾಪ್ ಸಿಂಹ ಅವರು ಕೆಸರುಮಯ ಬೆಟ್ಟದಲ್ಲಿ ಕಾರ್ಯಾಚರಣೆಗೂ ಕೈಜೋಡಿಸಿದರು. ಇದಕ್ಕೂ ಮೊದಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗಮಂಡಲದ ಶ್ರೀಭಗಂಡೇಶ್ವರ ದೇವಾಲಯದಲ್ಲಿ ವಿಶೆಷ ಪೂಜೆ ಸಲ್ಲಿಸಿದರು.