ಕೊಡಗಿನಲ್ಲಿ ಬುಧವಾರ 16 ಸೋಂಕಿತರು ಪತ್ತೆ

August 12, 2020

ಮಡಿಕೇರಿ, ಆ. 12 : ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ 16 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದೆ.
ಮಡಿಕೇರಿಯ ಕಾರಗುಂದ ಕಡಿಯತ್ತೂರಿನ 32 ವರ್ಷದ ಮಹಿಳೆ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ವಿರಾಜಪೇಟೆ ಸಿದ್ದಾಪುರದ ಎಂ.ಜಿ ರಸ್ತೆಯ 37 ವರ್ಷದ ಮಹಿಳೆ, 14 ವರ್ಷದ ಬಾಲಕಿ, 58 ವರ್ಷದ ಪುರುಷ, 47, 70 ವರ್ಷದ ಮಹಿಳೆ ಮತ್ತು 9 ವರ್ಷದ ಬಾಲಕ.
ಸೋಮವಾರಪೇಟೆ ಶಿರಂಗಾಲ ಕೋಟೆಯ 76 ವರ್ಷದ ಪುರುಷ ನತ್ತು 60 ವರ್ಷದ ಮಹಿಳೆ.
ವಿರಾಜಪೇಟೆಯ ಕಲ್ಲುಬಾಣೆಯ 38 ವರ್ಷದ ಪುರುಷ.
ಮಡಿಕೇರಿ ಭಗವತಿ ನಗರದ 29 ವರ್ಷದ ಪುರುಷ.
ಕುಶಾಲನಗರದ 35 ವರ್ಷದ ಪುರುಷ. ಕುಶಾಲನಗರದ ದಂಡಿನಪೇಟೆಯ 52 ವರ್ಷದ ಪುರುಷ.
ಮಡಿಕೇರಿಯ ಆಜಾದ್ ನಗರದ 25, 28 ವರ್ಷದ ಮಹಿಳೆ, 14 ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 776 ಆಗಿದ್ದು, 518 ಮಂದಿ ಗುಣಮುಖರಾಗಿದ್ದಾರೆ. 247 ಸಕ್ರಿಯ ಪ್ರಕರಣಗಳಿದ್ದು, 11 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 210 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

error: Content is protected !!