ಶುಕ್ರವಾರದಿಂದ ಕಾವೇರಿ ಕ್ಷೇತ್ರ ತಲಕಾವೇರಿಯಲ್ಲಿ ಪೂಜೆ ಆರಂಭ

12/08/2020

ಮಡಿಕೇರಿ ಆ.12 : ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಮತ್ತೆ ಎಂದಿನಂತೆ ಶುಕ್ರವಾರದಿಂದ ಪೂಜಾ ಕೈಂಕರ್ಯಗಳು ನಡೆಯಲಿವೆ.
ಬೆಟ್ಟ ಕುಸಿದು ಪ್ರಧಾನ ಅರ್ಚಕ ನಾರಾಯಣ ಆಚಾರ್ ಅವರ ಸಾವು ಸಂಭವಿಸಿದ ಹಿನ್ನೆಲೆ ಇದೇ ಮೊದಲ ಬಾರಿಗೆ ತಲಕಾವೇರಿಯಲ್ಲಿ ಪೂಜೆ ಸ್ಥಗಿತಗೊಂಡಿತ್ತು. ಏಳು ದಿನಗಳ ನಂತರ ಮತ್ತೆ ದೇವಾಲಯ ತೆರೆದುಕೊಳ್ಳಲಿದ್ದು, ಶಾಸಕ ಕೆ.ಜಿ.ಬೋಪಯ್ಯ ಅವರ ನೇತೃತ್ವದಲ್ಲಿ ಪೂಜೆ ಆರಂಭಗೊಳ್ಳಲಿದೆ.