ಕೊಡಗಿನ ಮಳೆಹಾನಿ ಪ್ರದೇಶಗಳಿಗೆ ನಿಖಿಲ್ ಕುಮಾರಸ್ವಾಮಿ ಭೇಟಿ

12/08/2020

ಮಡಿಕೇರಿ ಆ.12 : ಕೊಡಗಿನ ಮಳೆಹಾನಿ‌ ಪ್ರದೇಶಗಳಿಗೆ ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿದ್ದಾರೆ. ಜಿಲ್ಲೆಯ ಗಡಿ ಕೊಪ್ಪಗೇಟ್ ನಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ ಗಣೇಶ್ ಹಾಗೂ ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಸಿ.ಎಲ್.ವಿಶ್ವ ಮಾಲಾರ್ಪಣೆ ಮಾಡಿ ನಿಖಿಲ್ ಅವರನ್ನು ಬರ ಮಾಡಿಕೊಂಡರು.
ಕುಶಾಲನಗರ, ತಲಕಾವೇರಿ, ನಾಪೋಕ್ಲು, ಸಿದ್ದಾಪುರ ಭಾಗಗಳಲ್ಲಿ ಜೆಡಿಎಸ್ ಪ್ರಮುಖರು ಪರಿಶೀಲನೆ ನಡೆಸಲಿದ್ದಾರೆ.