ಗಾಂಜಾ ಮಾರಾಟ ಪ್ರಕರಣ : ಆರೋಪಿಗಳಿಗೆ ಜಾಮೀನು
12/08/2020

ಮಡಿಕೇರಿ ಆ. 12 : ಕೆಲ ತಿಂಗಳ ಹಿಂದೆ ವಿರಾಜಪೇಟೆಯ ಸುಂಕದಕಟ್ಟೆ ಬಳಿ ಇರುವ ಪಂಪಿಕೆರೆ ಮೈದಾನದಲ್ಲಿ ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಆರೋಪಿಗಳ ಪೈಕಿ ಪ್ರಮುಖ ಆರೋಪಿಗಳಾದ ನಿಸಾರ್ ಅಹ್ಮದ್ ಹಾಗೂ ಎ.ಎಸ್. ಸಿದ್ದಿಕ್ ಇವರುಗಳಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜಾಮೀನು ನೀಡಿದೆ.
ನ್ಯಾಯಾಧೀಶರಾದ ಪಿ.ಎಸ್. ಚಂದ್ರಶೇಖರ್ ಅವರು ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದ್ದು, ಆರೋಪಿಗಳ ಪರ ಹೈಕೋರ್ಟ್ ವಕೀಲ ಆರ್.ಕೆ. ಮಹದೇವ ವಕಾಲತ್ತು ವಹಿಸಿದ್ದರು.
