ಹೈಕೋರ್ಟ್ ಸರಕಾರಿ ವಕೀಲರಾಗಿ ಚೆಪ್ಪುಡೀರ ಪೂಣಚ್ಚ ನೇಮಕ
12/08/2020

ಮಡಿಕೇರಿ ಆ. 12 : ತಿತಿಮತಿ ನೊಕ್ಯದ ಚೆಪ್ಪುಡೀರ ಪೂಣಚ್ಚ ಕರ್ನಾಟಕ ಹೈಕೋರ್ಟ್ ನ ಸರ್ಕಾರಿ ವಕೀಲರಾಗಿ ನೇಮಕವಾಗಿದ್ದಾರೆ. ಹೈಕೋರ್ಟ್ ವಕೀಲರಾಗಿದ್ದ ಚೆಪ್ಪುಡೀರ ಮೊಣ್ಣಪ್ಪ ಅವರ ಪುತ್ರರಾಗಿರುವ ಪೂಣಚ್ಚ ಬೆಂಗಳೂರಿನಲ್ಲಿ ಶಿಕ್ಷಣ ಪಡೆದಿದ್ದು, ಇದುವರೆಗೂ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದರು.
