1500 ವ‌ರ್ಷ ಇತಿಹಾಸ ಹೊಂದಿರುವ ಪ್ರಸಿದ್ದ ಹಿಂದೂ ಧಾರ್ಮಿಕ ಕೇಂದ್ರ ಇಡಗುಂಜಿ ವಿನಾಯಕ ದೇವಾಲಯ

12/08/2020

ಇಡಗುಂಜಿ ವಿನಾಯಕ ದೇವಸ್ಥಾನವು ಕರ್ನಾಟಕದ ಬಹು ಪ್ರಸಿದ್ದ ಹಿಂದೂ ಧಾರ್ಮಿಕ ಕೇಂದ್ರವಾಗಿದ್ದೂ ಸುಮಾರು 1500 ವ‌ರ್ಷಕೂ ಮಿಗಿಲಾದ ಇತಿಹಾಸ ಹೊಂದಿರುತ್ತದೆ. ಇದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ರಾ.ಹೆ. 66 (ರಾ.ಹೆ. 17)ರಿಂದ 7 ಕೀ.ಮಿ. ದೂರದಲ್ಲಿ ಪೂರ್ವ ದಿಕ್ಕಿನಲ್ಲಿ ಇದೆ. ಈ ದೇವಸ್ಥಾನವನ್ನು ಸಾಮಾನ್ಯವಾಗಿ “ಇಡಗುಂಜಿ ದೇವಸ್ಥಾನ” ಎಂದು ಕರೆಯುತ್ತಾರೆ. ಕರ್ನಾಟಕದ ಕಡಲ ತೀರದ ಪ್ರಸಿದ್ದ (ಗೋಕರ್ಣ, ಇಡಗುಂಜಿ, ಹಟ್ಟಿ ಅಂಗಡಿ, ಗುಡ್ಡಟು ಆನೆಗುಡ್ಡೆ, ಶರವು, ಸೌತಡ್ಕ, )ಗಣಪತಿ ದೇವಸ್ಥಾನಗಳಲ್ಲಿ ಇಡಗುಂಜಿ ವಿನಾಯಕ ದೇವಸ್ಥಾನವು ಕೂಡ ಒಂದು. ಈ ದೇವಾಲಯದ ಪರಿಸರದಲ್ಲಿನ ಪ್ರಶಾಂತತೆ ನಿಜವಾಗಿಯೂ ಒಂದು ಅದ್ಭುತ ಅನುಭವ.

ವಿನಾಯಕ ಮೂರ್ತಿ: ವಿನಾಯಕ (ಗಣಪತಿಯ ಒಂದು ರೂಪ)ನನ್ನು ಇಲ್ಲಿ “ಮಹೋತಭಾರ ಶ್ರೀ ವಿನಾಯಕ” ದೇವರು ಎಂದು ಕರೆಯುತ್ತಾರೆ. ಈ ದೇವಸ್ಥಾನದಲ್ಲಿ ವಿನಾಯಕ ಮೂರ್ತಿಯು ನಿಂತಿರುವ “ದ್ವಿ ಭುಜ” ಭಂಗಿಯಲ್ಲಿ ಸುಮಾರು ೮೮ ಸೆ.ಮೀ ಎತ್ತರ ಮತ್ತು ೫೯ಸೆ.ಮೀ ಅಗಲವನ್ನು ಹೊಂದಿರುತ್ತದೆ. ಮೂರ್ತಿಯ ಬಲ ಕೈಯಲ್ಲಿ ಕಮಲದ ಹೂ ಮತ್ತು ಎಡ ಕೈಯಲ್ಲಿ ವೋದಕವನ್ನು ಹೊಂದಿದೆ. ಗಣಪತಿಯ ವಾಹನ ಮೂಷಿಕ (ಇಲಿ)ನನ್ನು ಇಲ್ಲಿ ಮೂರ್ತಿಯ ಪಕ್ಕದಲ್ಲಿ ನೋಡಲು ಸಿಗುವುದಿಲ್ಲ.

ಇಲ್ಲಿಗೆ ತಲುಪುವುದು ಹೇಗೆ?
ರಸ್ತೆ ಮಾರ್ಗ: ಭಟ್ಕಳ ಮತ್ತು ಹೊನ್ನಾವರ ದಿಂದ ರಾ.ಹೆ. ೬೬ (ರಾ.ಹೆ. ೧೭)ರಲ್ಲಿ ಖಾಸಗಿ ಮತ್ತು ಸರಕಾರಿ ಸಾರಿಗೆ ವ್ಯವಸ್ಥೆ ಇದೆ. ಭಟ್ಕಳ ಯಿಂದ ೩೨ ಕಿ.ಮೀ ಹಾಗೂ ಹೊನ್ನಾವರದಿಂದ ೧೫ ಕಿ.ಮೀ ದೂರ.
ಹತ್ತಿರದ ರೈಲ್ವೆ ನಿಲ್ದಾಣ: ಹೊನ್ನಾವರ (ಕೊಂಕಣ ರೈಲ್ವೆ ) ಅಥವಾ ಮುರುಡೇಶ್ವರ (ಕೊಂಕಣ ರೈಲ್ವೆ ).
ಹತ್ತಿರದ ವಿಮಾನ ನಿಲ್ದಾಣ: ಬಜಪೆ ವಿಮಾನ ನಿಲ್ದಾಣ, ಮಂಗಳೂರು

ದೇವಸ್ಥಾನದ ಸಮಯ :
ದರ್ಶನ ಸಮಯ: ಮುಂಜಾನೆ 6:00 ಗಂಟೆಯಿಂದ ಮಧ್ಯಾಹ್ನ 1:00 ಗಂಟೆಯ ತನಕ ಮತ್ತು ಮಧ್ಯಾಹ್ನ 3:00 ಗಂಟೆಯಿಂದ ರಾತ್ರಿ 8:30 ರ ತನಕ
ಅಭಿಷೇಕದ ಸಮಯ: ಮುಂಜಾನೆ 6:00 ಗಂಟೆ, ಬೆಳಗ್ಗೆ 11:00 ಗಂಟೆ (ಮಹಾ ಅಭಿಷೇಕ) ಮತ್ತು ರಾತ್ರಿ 7:00 ಗಂಟೆಗೆ
ಪೂಜೆ ಸಮಯ:ಮುಂಜಾನೆ 8:00 ಗಂಟೆ, ಮಧ್ಯಾಹ್ನ 12:30 ಗಂಟೆ (ಮಹಾ ಪೂಜೆ) ಮತ್ತು ರಾತ್ರಿ 8:00 ಗಂಟೆ