ಕೊಡಗಿನಲ್ಲಿ ಒಂದೇ ದಿನ 60 ಕೊವೀಡ್ ಪ್ರಕರಣ ಪತ್ತೆ : 800ರ ಗಡಿ ದಾಟಿದ ಸೋಂಕಿತರ ಸಂಖ್ಯೆ

August 12, 2020

ಮಡಿಕೇರಿ ಆ.11 : ಕೊಡಗು ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ 16 ಹಾಗೂ ಮಧ್ಯಾಹ್ನ 44 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಒಂದೇ ದಿನದಲ್ಲಿ 60 ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುವುದರೊಂದಿಗೆ ಜಿಲ್ಲೆಯಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಇದರೊಂದಿಗೆ ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 820ಕ್ಕೇರಿದ್ದು, ಈ ಪೈಕಿ 518 ಮಂದಿ ಗುಣಮುಖರಾಗಿದ್ದಾರೆ. 291 ಸಕ್ರಿಯ ಪ್ರಕರಣಗಳಿದ್ದು, 11 ಮಂದಿ ಸಾವಿಗೀಡಾಗಿದ್ದಾರೆ.

ಬುಧವಾರ ಬೆಳಗ್ಗೆ ಮಡಿಕೇರಿಯ ಕಾರಗುಂದ ಕಡಿಯತ್ತೂರಿನ 32 ವರ್ಷದ ಮಹಿಳೆ, ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ವೀರಾಜಪೇಟೆ ಸಿದ್ದಾಪುರದ ಎಂ.ಜಿ ರಸ್ತೆಯ 37ವರ್ಷದ ಮಹಿಳೆ, 14ವರ್ಷದ ಬಾಲಕಿ, 58ವರ್ಷದ ಪುರುಷ, 47, 70 ವರ್ಷದ ಮಹಿಳೆ ಮತ್ತು 9 ವರ್ಷದ ಬಾಲಕನಲ್ಲಿ ಸೋಂಕು ಕಾಣಿಸಿಕೊಂಡಿದೆ.

ಸೋಮವಾರಪೇಟೆ ಶಿರಂಗಾಲ ಕೋಟೆಯ 76 ವರ್ಷದ ಪುರುಷ ಮತ್ತು 60 ವರ್ಷದ ಮಹಿಳೆ, ವೀರಾಜಪೇಟೆಯ ಕಲ್ಲುಬಾಣೆಯ 38 ವರ್ಷದ ಪುರುಷ, ಮಡಿಕೇರಿ ಭಗವತಿ ನಗರದ 29ವರ್ಷದ ಪುರುಷ, ಕುಶಾಲನಗರದ 35ವರ್ಷದ ಪುರುಷ, ಕುಶಾಲನಗರದ ದಂಡಿನಪೇಟೆಯ 52 ವರ್ಷದ ಪುರುಷನಲ್ಲೂ ಸೋಂಕು ದೃಢಪಟ್ಟಿದೆ.

ಮಡಿಕೇರಿಯ ಆಜಾದ್ ನಗರದ 25, 28 ವರ್ಷದ ಮಹಿಳೆ, 14ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದೆ.

ಬುಧವಾರ ಮಧ್ಯಾಹ್ನ 44 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಸೋಮವಾರಪೇಟೆ ತಾಲೂಕಿನ ಹಾಲೇರಿ ಗ್ರಾಮದ ತಾತಿಬಾಣೆಯ 39 ವರ್ಷದ ಮಹಿಳೆ, ಕೊಡ್ಲಿಪೇಟೆ ಅವರದಾಳುವಿನ 43 ವರ್ಷದ ಪುರುಷ, ಹಾನಗಲ್ ಗ್ರಾಮದ 55 ವರ್ಷದ ಮಹಿಳೆ,ಸೋಮವಾರಪೇಟೆ ವೆಂಕಟೇಶ್ವರ ಬ್ಲಾಕ್‍ನ 40 ವರ್ಷದ ಮಹಿಳೆ, ಗಾಂಧಿನಗರ ಮಾರಿಯಮ್ಮ ದೇವಾಲಯ ಬಳಿಯ 19 ವರ್ಷದ ಮಹಿಳೆ, ಶನಿವಾರಸಂತೆ ಚಂಗಡÀಳ್ಳಿಯ 57 ವರ್ಷದ ಪುರುಷ ಮತ್ತು 53 ವರ್ಷದ ಮಹಿಳೆ, ಶನಿವಾರಸಂತೆ ಗುಂಡೂರಾವ್ ಬಡಾವಣೆಯ 36 ವರ್ಷದ ಪುರುಷ, ಶನಿವಾರಸಂತೆ ಮೈಲಾಪುರ ಬಳಿಯ 74 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ಸೋಮವಾರಪೇಟೆ ಗೌಡಳ್ಳಿ ಕೂಗೂರುವಿನ 54 ವರ್ಷದ ಮಹಿಳೆ.ಗೌಡಳ್ಳಿ ಯಡೂವಿನ 35 ವರ್ಷದ ಮಹಿಳೆ, ಅಂಕನಹಳ್ಳಿ ಗ್ರಾಮದ 42 ವರ್ಷದ ಪುರುಷ, ತೋಳೂರು ಶೆಟ್ಟಳ್ಳಿ ಕೊಪ್ಪ ರಸ್ತೆಯ ದೊಡ್ಡಮನೆ ಬಸವೇಶ್ವರ ದೇವಾಲಯ ಹಿಂಭಾಗದ 72 ವರ್ಷದ ಮಹಿಳೆ, ಕುಶಾಲನಗರದ ಗೌಡ ಸಮಾಜ ಬಳಿಯ ಅಂಗನವಾಡಿ ಹಿಂಭಾಗದ 54 ವರ್ಷದ ಪುರುಷ, ಸುಂಟಿಕೊಪ್ಪ 2 ನೇ ಬ್ಲಾಕಿನ 35 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ವೀರಾಜಪೇಟೆ ತಾಲೂಕು: ವೀರಾಜಪೇಟೆ ತಾಲೂಕಿನ ಕೆ.ಬಾಡಗದ 32 ವರ್ಷದ ಪುರುಷ ಮತ್ತು 27 ವರ್ಷದ ಮಹಿಳೆ, ವೀರಾಜಪೇಟೆ ವಿಜಯನಗರದ 48 ವರ್ಷದ ಪುರುಷ, ವೀರಾಜಪೇಟೆ ಬೊಯಿಕೇರಿ ಗ್ರಾಮದ 55 ವರ್ಷದ ಮಹಿಳೆ, ಪೆರುಂಬಾಡಿಯ ಅರ್ಜಿ ಬಳಿಯ ವಾಲ್ಮೀಕಿ ಭವನದ 27 ವರ್ಷದ ಪುರುಷ. ಪೊನ್ನಂಪೇಟೆಯವ ಹೊಸ್ಕೇರಿ ಲೇಔಟಿನ ಭಗವತಿ ನಗರದ 60 ವರ್ಷದ ಪುರುಷ, 38 ವರ್ಷದ ಮಹಿಳೆ ಮತ್ತು 16 ವರ್ಷದ ಬಾಲಕ, ಗೋಣಿಕೊಪ್ಪದ ಮುಕುಂದ ಲೇಔಟ್‍ನ 3ನೇ ಬ್ಲಾಕ್‍ನ 36 ವರ್ಷದ ಮಹಿಳೆ, ವಿ.ಬಾಡಗ ಕುಟ್ಟುಂದಿಯ 38 ವರ್ಷದ ಪುರುಷನಲ್ಲಿ ಸೋಂಕು ಗೋಚರಿಸಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದ್ದಾರೆ.

ಮಡಿಕೇರಿ ತಾಲೂಕು: ಮಡಿಕೇರಿ ಬ್ರಾಹ್ಮಣರ ಬೀದಿಯ ರೆಡ್ ಫೆರ್ನ್ ಹೊಟೇಲ್ ಬಳಿಯ 45 ವರ್ಷದ ಮಹಿಳೆ, ಮಹದೇವಪೇಟೆಯ 21 ವರ್ಷದ ಮಹಿಳೆ, 13 ವರ್ಷದ ಬಾಲಕಿ, 55 ಮತ್ತು 48 ವರ್ಷದ ಪುರುಷರು, ಮಡಿಕೇರಿ ಮಹದೇವಪೇಟೆಯ 36 ವರ್ಷದ ಪುರುಷ, ಮಡಿಕೇರಿ ಮಹದೇವಪೇಟೆ ಮಸೀದಿ ಎದುರಿನ 44 ವರ್ಷದ ವ್ಯಕ್ತಿ, ಮಹದೇವಪೇಟೆಯ ಜಾಮಿಯಾ ಮಸೀದಿ ಬಳಿಯ 45 ವರ್ಷದ ಪುರುಷ, ಸುದರ್ಶನ ವೃತ್ತ ಅಂಬೇಡ್ಕರ್ ಭವನ ಬಳಿಯ 53 ವರ್ಷದ ಪುರುಷ, ಮೂರ್ನಾಡು ಹಾಕತ್ತೂರು ಗ್ರಾಮದ 24 ವರ್ಷದ ಪುರುಷ, ಮಡಿಕೇರಿ ಮುತ್ತಪ್ಪ ದೇವಾಲಯ ರಸ್ತೆಯ 44 ವರ್ಷದ ಪುರುಷ ಮತ್ತು 6 ವರ್ಷದ ಬಾಲಕ, ನಾಪೋಕ್ಲು ಕೊಟ್ಟಮುಡಿಯಲ್ಲಿನ 23 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.

ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಮಲ್ಲಿಕಾರ್ಜುನ ನಗರದ 53 ವರ್ಷದ ಪುರುಷ, ವೀರಾಜಪೇಟೆ ತಿತಿಮತಿಯ 32 ವರ್ಷದ ಮಹಿಳೆ. ಸೋಮವಾರಪೇಟೆ ಸುಂಟಿಕೊಪ್ಪದ ಹರದೂರು ಗ್ರಾಮದ 40 ವರ್ಷದ ಪುರುಷ, ಹಾರಂಗಿ ರಸ್ತೆಯ ಬೊಳ್ಳೂರು ಗ್ರಾಮದ 52 ಮತ್ತು 27 ವರ್ಷದ ಮಹಿಳೆ. ನಾಪೋಕ್ಲು ಎಮ್ಮೆಮಾಡುವಿನ 34 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿನ ಕಂಟೈನ್‍ಮೆಂಟ್ ವಲಯಗಳ ಸಂಖ್ಯೆ 236 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.