ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಯಿಂದ ಸಾಧಕ ವಿದ್ಯಾರ್ಥಿ ಅನುಷ್‍ಗೆ ಅಭಿನಂದನೆ

12/08/2020

ಮಡಿಕೇರಿ ಆ.12 : 2019-20 ರ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದ ಸುಳ್ಯ ತಾಲೂಕಿನ ಬಳ್ಪ ಗ್ರಾಮದ ಎಣ್ಣೆಮಜಲು ನಿವಾಸಿ ಲೋಕೇಶ್ ಗೌಡ ಮತ್ತು ಉಷಾ ದಂಪತಿಗಳ ಪುತ್ರ ಅನುಷ್ ಇವರನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಗೌರವಿಸಿ, ಶುಭಕೋರಲಾಯಿತು.
ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಸದಸ್ಯರಾದ ಜಯಪ್ರಕಾಶ್ ಮೋಂಟಡ್ಕ, ಬಿಳಿನೆಲೆ, ಪುರುಷೋತ್ತಮ ಕಿರ್ಲಾಯ ಮತ್ತು ಎ.ಟಿ.ಕುಸುಮಾಧರಗೌಡ ಸುಳ್ಯ ಇವರು ಉಪಸ್ಥಿತರಿದ್ದರು.