ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ 2,677 ವಿದ್ಯುತ್ ಕಂಬಗಳಿಗೆ ಹಾನಿ

12/08/2020

ಮಡಿಕೇರಿ ಆ.12 : ಜಿಲ್ಲೆಯಲ್ಲಿ ಆಗಸ್ಟ್ ಮೊದಲ ವಾರದಲ್ಲಿ ಸುರಿದ ಭಾರೀ ಮಳೆಗೆ ಸಾಕಷ್ಟು ಹಾನಿ ಸಂಭವಿಸಿದೆ. ಜಿಲ್ಲೆಯಲ್ಲಿ ಸುರಿದ ವ್ಯಾಪಕ ಮಳೆ ಮತ್ತು ಭಾರೀ ಗಾಳಿಯಿಂದಾಗಿ ವಿದ್ಯುತ್ ಪೂರೈಕೆ ಸಂಬಂಧ ವ್ಯತ್ಯಯ ಉಂಟಾಗಿದೆ. ಅಲ್ಲದೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಮಡಿಕೇರಿ ವಿಭಾಗದಲ್ಲಿ ಉಂಟಾದ ಹಾನಿಯ ಮಾಹಿತಿಯನ್ನು ಸೆಸ್ಕ್ ಇಇ ಸೋಮಶೇಖರ್ ಅವರು ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ 2,677 ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು 25,650 ಮೀಟರ್ ವಿದ್ಯುತ್ ಮಾರ್ಗಕ್ಕೂ ಹಾನಿ ಸಂಭವಿಸಿದೆ. 75 ವಿದ್ಯುತ್ ಪರಿವರ್ತಕಗಳು ತೊಂದರೆಗೀಡಾಗಿದೆ. ಅಂದಾಜು 304.81 ಲಕ್ಷ ರೂ. ಹಾನಿ ಸಂಭವಿಸಿದೆ.
ಮಡಿಕೇರಿಯಲ್ಲಿ 722 ವಿದ್ಯುತ್ ಕಂಬಗಳು, 10,700 ಮೀಟರ್ ವಿದ್ಯುತ್ ಮಾರ್ಗ, 24 ವಿದ್ಯುತ್ ಪರಿವರ್ತಕ (ಟ್ರಾನ್ಸ್ ಫಾರ್ಮರ್), ಸೇರಿದಂತೆ 88.83 ಲಕ್ಷ ರೂ. ಹಾನಿ.
ಸೋಮವಾರಪೇಟೆ ತಾಲೂಕಿನಲ್ಲಿ 794 ವಿದ್ಯುತ್ ಕಂಬಗಳು, 5,500 ಮೀಟರ್ ವಿದ್ಯುತ್ ಮಾರ್ಗ, 22 ವಿದ್ಯುತ್ ಪರಿವರ್ತಕಗಳು ಸೇರಿದಂತೆ 89.91 ಲಕ್ಷ ರೂ. ಹಾನಿಯಾಗಿದೆ.
ವಿರಾಜಪೇಟೆ ತಾಲೂಕಿನಲ್ಲಿ 1161 ಕಂಬಗಳು, 9,450 ಮೀಟರ್ ವಿದ್ಯುತ್ ಮಾರ್ಗ, 29 ವಿದ್ಯುತ್ ಪರಿವರ್ತಕ ಸೇರಿದಂತೆ 126.07 ಲಕ್ಷ ರೂ. ಹಾನಿ ಸಂಭವಿಸಿದೆ.
ತ್ವರಿತ ಗತಿಯಲ್ಲಿ ಹಾನಿಗೊಳಗಾದ ವಿದ್ಯುತ್ ವಿತರಣಾ ಜಾಲದ ಪುನರ್ ಸ್ಥಾಪನೆಗೆ ವಿಶೇಷವಾಗಿ ನಿಯೋಜಿಸಿರುವ ಸಿಬ್ಬಂದಿ, ವಾಹನ ವಿದ್ಯುತ್ ಪರಿಕರಗಳ ವಿವವರಗಳು ಇಂತಿವೆ.
ವಿಭಾಗದಲ್ಲಿ ಒಟ್ಟು 385 ಶಾಶ್ವತ ನಿರ್ವಹಣಾ ಸಿಬ್ಬಂದಿಗಳಿದ್ದು, ಹೆಚ್ಚುವರಿಯಾಗಿ 200 ಸಂಖ್ಯೆಯ ನಿರ್ವಹಣಾ ಸಿಬ್ಬಂದಿಗಳನ್ನು ಚಾವಿಸನಿನಿಯ ಮೈಸೂರು ಹಾಗೂ ವೃತ್ತಗಳಿಂದ ಹಾಗೂ ಗುತ್ತುಗೆ ಏಜನಿ ಮುಖಾಂತರ ನಿಯೋಜಿಸಲಾಗಿದೆ. ನಿಗಮದ ಸಿಬ್ಬಂದಿ ವತಿಯಿಂದ ದುರಸ್ತಿ ಕಾರ್ಯ ಕೈಗೊಂಡಿದ್ದು, ಇದರ ಜೊತೆಗೆ ಗುತ್ತಿಗೆದಾರರಿಂದಲೂ ಸಹ ಕಾಮಗಾರಿ ಕೈಗೊಳ್ಳಲಾಗುತ್ತಿದೆ.
ವಿಭಾಗದಲ್ಲಿ 06 ಲಾರಿ, 05 ಜೀಪುಗಳನ್ನು ಬಳಸಲಾಗುತ್ತಿದ್ದು, ಹೆಚ್ಚುವರಿಯಾಗಿ 15 ಪಿಕ್‍ಅಪ್ ಜೀಪುಗಳು, 05 ಲಾರಿಗಳು ಮತ್ತು 02 ಕ್ರೇನ್ ಲಾರಿಗಳನ್ನು ನಿಯೋಜಿಸಲಾಗಿದೆ. ಇದಲ್ಲದೆ ಅಗತ್ಯಾನುಸಾರ ಇನ್ನೂ ಹೆಚ್ಚುವರಿ ವಾಹನ ಹಾಗೂ ಕ್ರೇನ್ ಲಾರಿ ಪಡೆಯಲಾಗುತ್ತಿದೆ. ದುರಸ್ತಿ ಕಾಮಗಾರಿಗಳಿಗೆ ಅಗತ್ಯವಿರುವ ಕಂಬಗಳು, ವಿದ್ಯುತ್ ಪರಿವರ್ತಕಗಳು, ವಾಹಕ ಹಾಗೂ ಇತರೆ ವಿದ್ಯುತ್ ಪರಿಕರಗಳನ್ನು ದಾಸ್ತಾನು ಮಾಡಲಾಗಿದೆ. ಅಲ್ಲದೆ ಮುನ್ನೆಚ್ಚರಿಕಾ ಕ್ರಮವಾಗಿ ಇನ್ನೂ ಹೆಚ್ಚಿನ ಸಾಮಾಗ್ರಿ ನಿಗಮ ಕಚೇರಿಯಿಂದ ಸರಬರಾಜು ಮಾಡಲು ಖರೀದಿ ಆದೇಶ ನೀಡಲಾಗಿದೆ.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ವತಿಯಿಂದ ಮಳೆ ಹಾನಿ ಸಂಬಂಧಿಸಿದಂತೆ ಹಲವು ಕ್ರಮ ಕೈಗೊಂಡಿದ್ದು, ಆ ನಿಟ್ಟಿನಲ್ಲಿ ಮಳೆಹಾನಿ ಸರಿಪಡಿಸಲು ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಹೆಸರು ಮತ್ತು ದೂರವಾಣಿ ಸಂಖ್ಯೆ ವಿವರು ಇಂತಿದೆ ಎಂದು ಸೆಸ್ಕ್ ಇಇ ಸೋಮಶೇಖರ್ ಅವರು ತಿಳಿಸಿದ್ದಾರೆ.
ಮಡಿಕೇರಿ ತಾಲೂಕಿನ ಮುಖ್ಯ ನೋಡಲ್ ಅಧಿಕಾರಿಯಾಗಿ ದೇವಯ್ಯ ಪಿ.ಎನ್ (9449598602, 9448721021). ಮಡಿಕೇರಿ ಕಸಬಾ ಹೋಬಳಿಗೆ ನೋಡಲ್ ಅಧಿಕಾರಿಯಾಗಿ ಸಂಪತ್ ಕುಮಾರ್ (9449598603), ಸಂಪಾಜೆ-ಅನಿಲ್ ಕುಮಾರ್ (9448994851), ಭಾಗಮಂಡಲ-ಹರಿಣಾಕ್ಷಿ (9480810344), ನಾಪೋಕ್ಲು-ಹರೀಶ್ (9449598615) ಸಂಪರ್ಕಿಸಬಹುದಾಗಿದೆ.
ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಮತ್ತು ಕುಶಾಲನಗರ ಹೋಬಳಿ ವ್ಯಾಪ್ತಿಯ ಮುಖ್ಯ ನೋಡಲ್ ಅಧಿಕಾರಿಯಾಗಿ ಅಶೋಕ್ (9449598538, 9008563729), ಸುಂಟಿಕೊಪ್ಪ-ಜಯದೀಪ್ (9449598615), ಕುಶಾಲನಗರ-ವಿನಯ ಕುಮಾರ್ (9449598589),
ಸೋಮವಾರಪೇಟೆ ಕಸಬಾ, ಶನಿವಾರಸಂತೆ, ಕೊಡ್ಲೀಪೇಟೆ, ಶಾಂತಳ್ಳಿಗೆ ಧನುಂಜಯ ಅವರನ್ನು ಮುಖ್ಯ ನೊಡಲ್ ಅಧಿಕಾರಿಯಾಗಿ ನೇಮಿಸಲಾಗಿದ್ದು (9449598612, 7406628003). ಸೋಮವಾರಪೇಟೆ ಕಸಬಾ-ಸಂತೋಷ ಕುಮಾರ್ (9449598614), ಶನಿವಾರಸಂತೆ-ಹೇಮಂತ್ ಕುಮಾರ್ (9449598616), ಕೊಡ್ಲೀಪೇಟೆ-ಮನುಕುಮಾರ್ (9449598617), ಶಾಂತಳ್ಳಿ ದಯಾನಂದ (9480837509) ಸಂಪರ್ಕಿಸಬಹುದಾಗಿದೆ.
ವೀರಾಜಪೇಟೆ ತಾಲೂಕಿನ ವೀರಾಜಪೇಟೆ ಕಸಬಾ, ಅಮ್ಮತ್ತಿ, ಸಿದ್ದಾಪುರ ಹೋಬಳಿಗೆ ಮುಖ್ಯ ನೋಡಲ್ ಅಧಿಕಾರಿಯಾಗಿ ಸುರೇಶ್ ಅವರನ್ನು ನೇಮಿಸಲಾಗಿದ್ದು, (9480837545). ವೀರಾಜಪೇಟೆ ಕಸಬಾಗೆ ರಮೇಶ್ (9449598610), ಅಮ್ಮತ್ತಿ- ದೇವಯ್ಯ (9448994344), ಸಿದ್ದಾಪುರ-ಚಂಪಾವತಿ (9449598611).
ವೀರಾಜಪೇಟೆ ತಾಲೂಕಿನ ಹುದಿಕೇರಿ, ಶ್ರೀಮಂಗಲ, ಪೊನ್ನಂಪೇಟೆ ಮತ್ತು ಬಾಳೆಲೆ ಹೋಬಳಿ ವ್ಯಾಪ್ತಿಗೆ ಮುಖ್ಯ ನೋಡಲ್ ಅಧಿಕಾರಿಯಾಗಿ ಅಂಕಯ್ಯ ಅವರನ್ನು ನೇಮಿಸಲಾಗಿದೆ. (9449598607, 9535184793). ಹುದಿಕೇರಿ, ಶ್ರೀಮಂಗಲ-ವಿಜಯ ಕುಮಾರ್ 9449598609, ಪೊನ್ನಂಪೇಟೆ-ಕೃಷ್ಣಕುಮಾರ್ (9449597484), ಬಾಳೆಲೆ-ಮನುಕುಮಾರ್ (9449597484) ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಸೆಸ್ಕ್ ಇಇ ಸೋಮಶೇಖರ್ ಅವರು ತಿಳಿಸಿದ್ದಾರೆ.