10ನೇ ತರಗತಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಐಗೂರು ಶಾಲೆಯ ಕೆ.ಆರ್.ಹರ್ಷಿತಾ

12/08/2020

ಸೋಮವಾರಪೇಟೆ ಆ.12 : ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಐಗೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ಕೆ.ಆರ್.ಹರ್ಷಿತಾ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಒಟ್ಟು 598 ಅಂಕಗಳನ್ನು ಪಡೆದಿರುವ ಈಕೆ ಶೇಖಡ 95.68% ಸಾಧನೆ ಮಾಡುವ ಮೂಲಕ ಶಾಲೆಗೆ ಕೀರ್ತಿ ತಂದಿರುತ್ತಾಳೆ.ಕನ್ನಡದಲ್ಲಿ 123,ಇಂಗ್ಲೀಷ್ 92,ಹಿಂದಿ 96,ಗಣಿತ 95,ವಿಜ್ಞಾನ 96,ಸಮಾಜವಿಜ್ಞಾನದಲ್ಲಿ 96 ಅಂಕಗಳನ್ನು ಪಡೆದಿರುವ ಈಕೆ ಐಗೂರು ಗ್ರಾಮದ ರಾಮಚಂದ್ರ ಆಚಾರ್ಯ ಮತ್ತು ಸರಸ್ವತಿ ಅವರ ಪುತ್ರಿ.