ಸೋಮವಾರಪೇಟೆ ಕರಡು ಮತದಾರರ ಪಟ್ಟಿ : ಆಕ್ಷೇಪಣೆಗೆ ಆ.14 ಕೊನೆ ದಿನ

12/08/2020

ಸೋಮವಾರಪೇಟೆ ಆ.12 : ತಾಲೂಕಿನ 40 ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸುವ ಸಂಬಂಧ ಈಗಾಗಲೇ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ಇದಕ್ಕೆ ಆಕ್ಷೇಪಣೆಗಳಿದ್ದರೆ ಆ.14ರ ಒಳಗೆ ಸಲ್ಲಿಸಬೇಕೆಂದು ತಾಲೂಕು ತಹಸೀಲ್ದಾರ್ ಗೋವಿಂದರಾಜು ಅವರು ತಿಳಿಸಿದ್ದಾರೆ.
ಈಗಾಗಲೇ ಕ್ಷೇತ್ರವಾರು ಮತದಾರರ ಪಟ್ಟಿಯನ್ನು ತಯಾರಿಸಿ ಕರಡು ಮತದಾರರ ಪಟ್ಟಿಯನ್ನು ತಾಲೂಕು ಕಚೇರಿ, ಗ್ರಾಮ ಪಂಚಾಯಿತಿ ಕಚೇರಿ ಮತ್ತು ಕಂದಾಯ ಪರಿವೀಕ್ಷಕರ ಕಚೇರಿಗಳಲ್ಲಿ ಪ್ರಕಟಿಸಿದ್ದು, ಇದರಲ್ಲಿ ದೋಷಗಳಿದ್ದರೆ ಆಗಸ್ಟ್ 14ರೊಳಗೆ ತಾಲೂಕು ಕಚೇರಿಗೆ ಲಿಖಿತ ಆಕ್ಷೇಪಣೆ ಸಲ್ಲಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.