ಪುಷ್ಪಗಿರಿ ಜೇಸಿ ಸಂಸ್ಥೆಯಿಂದ ಕೋವಿಡ್ ಯೋಧರಿಗೆ ಸನ್ಮಾನ
12/08/2020

ಸೋಮವಾರಪೇಟೆ ಆ.12 : ಪುಷ್ಪಗಿರಿ ಜೇಸಿ ಸಂಸ್ಥೆಯ ವತಿಯಿಂದ “ಸೆಲ್ಯೂಟ್ ದಿ ಸೈಲೆಂಟ್ ವರ್ಕರ್” ಕಾರ್ಯಕ್ರಮದಲ್ಲಿ ಕೊರೋನಾ ಸೇನಾನಿಗಳನ್ನು ಬುಧವಾರ ಸನ್ಮಾನಿಸಲಾಯಿತು.
ತಹಸೀಲ್ದಾರ್ ಗೋವಿಂದರಾಜು, ಸಿಪಿಐ ನಂಜುಂಡೇಗೌಡ, ಪಿಎಸ್‍ಐ ಶಿವಶಂಕರ್ ಅವರುಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಸಂಸ್ಥೆಯ ಅಧ್ಯಕ್ಷರಾದ ಉಮಾರಾಣಿ, ಕಾರ್ಯದರ್ಶಿ ಮಂಜುಳಾ ಸುಬ್ರಮಣಿ, ಪದಾಧಿಕಾರಿಗಳಾದ ವಿದ್ಯಾ ಸೊಮೇಶ್, ಗುರುಪ್ರಸಾದ್, ಸೊಮೇಶ್, ಮನೋಹರ್, ಸದಸ್ಯರುಗಳಾದ ಗಿತಾ ರವಿ, ಸುದೀಪ್, ಪ್ರದೀಪ್, ನೆಲ್ಸನ್ ಡಿಸೋಜಾ ಇದ್ದರು.