ಸೋಮವಾರಪೇಟೆ ಅಂಚೆ ಕಚೇರಿಯ ಎಂ.ಕೆ.ಕೃಷ್ಣ ಉಪಾಧ್ಯಾಯರಿಗೆ ಬೀಳ್ಕೊಡುಗೆ

12/08/2020

ಸೋಮವಾರಪೇಟೆ ಆ.12 : ಪಟ್ಟಣದ ಅಂಚೆ ಕಚೇರಿಯ ಎಂ.ಟಿ.ಎಸ್. ಆಗಿ ಕರ್ತವ್ಯ ನಿರ್ವಹಿಸಿ ಇದೀಗ ನಿವೃತ್ತರಾದ ಎಂ.ಕೆ.ಕೃಷ್ಣ ಉಪಾಧ್ಯಾಯ ಅವರನ್ನು ಈಚೆಗೆ ಬೀಳ್ಕೊಡಲಾಯಿತು.
ಅಂಚೆ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಈ ಸಂದರ್ಭ ಅಂಚೆ ಪಾಲಕರಾದ ರೋಡ್ನಿಕೋಟ್ರ್ಸ್, ತಾಲ್ಲೂಕು ಅಂಚೆ ಉಪ ನಿರೀಕ್ಷಕ ಮಂಜುನಾಥ ಬಂಗೇರ ಹಾಗು ಅಂಚೆ ಪಾಲಕರು ಇದ್ದರು.