ಕೋವಿಡ್ ಪರೀಕ್ಷೆ : ಸೋಮವಾರಪೇಟೆ ಪಟ್ಟಣದಲ್ಲಿ ಇಬ್ಬರಿಗೆ ಸೋಂಕು

12/08/2020

ಸೋಮವಾರಪೇಟೆ ಆ.12 : ರಾಪಿಡ್ ಕೊರೊನಾ ಪರೀಕ್ಷಾ ಕಾರ್ಯಕ್ರಮದಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಸಿದ ಕೊರೊನಾ ಸೋಂಕು ಪತ್ತೆ ಕಾರ್ಯದಲ್ಲಿ, ಈರ್ವರಿಗೆ ಪಾಸಿಟಿವ್ ವರದಿ ಬಂದಿದೆ.
ಪಟ್ಟಣ ಪಂಚಾಯಿತಿ ಕಚೇರಿ ಆವರಣ ಹಾಗೂ ಜನತಾ ಕಾಲೋನಿಯಲ್ಲಿ ಒಟ್ಟು 106 ಮಂದಿಯ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ ಜನತಾ ಕಾಲೋನಿಯ ಈರ್ವರಿಗೆ ಪಾಸಿಟಿವ್ ಬಂದಿದೆ.