ಮತ್ತಿಗೋಡು ಆನೆ ಶಿಬಿರದಲ್ಲಿ ಸಂಭ್ರಮದ ವಿಶ್ವ ಆನೆ ದಿನಾಚರಣೆ

12/08/2020

ಚೆಟ್ಟಳ್ಳಿ ಆ.12 : ವಿಶ್ವ ಆನೆ ದಿನಾಚರಣೆಯ ಪ್ರಯುಕ್ತ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶವಾದ ಕೊಡಗಿನ ಮತ್ತಿಗೋಡು ಆನೆ ಶಿಬಿರದಲ್ಲಿ ವಿಶ್ವ ಆನೆ ದಿನಾಚರಣೆ ಅರ್ಥಪೂರ್ಣವಾಗಿ ನಡೆಯಿತು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕರು ಡಿ.ಮಹೇಶ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕಡಿಮೆ ಕಾಲಾವಧಿಯಲ್ಲಿ ಆನೆಯನ್ನು ಯಶಸ್ವಿಯಾಗಿ ಪಳಗಿಸಿರುವ ಮಾವುತ ಮತ್ತು ಕಾವಾಡಿಗಳಿಗೆ ಪ್ರಥಮ ಗಣೇಶ ಆನೆ, ದ್ವಿತೀಯ ಮಹೇಂದ್ರ ಆನೆ ಹಾಗು ತ್ರತೀಯ ಶೀಕಂಠ ಆನೆಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಉಳಿದ ಮಾವುತ ಮತ್ತು ಕಾವಾಡಿಗಳಿಗೆ ಸಮಾಧಾನಕರ ಬಹುಮಾನಗಳಾಗಿ ಹೂಗುಚ್ಚ ಹಾಗು ಪಂಶಸನಾ ಪತ್ರನೀಡಿ ಗೌರವಿಸಲಾಯಿತು.
ನಾಗರಗಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರು ವಿಶ್ವ ಆನೆ ದಿನಾಚರಣೆಯ ಬಗ್ಗೆ, ಆನೆಗಳ ಬಗ್ಗೆ, ನಿರ್ವಹಣೆಯ ಬಗ್ಗೆ ಹಾಗು ಅದರ ಸಂರಕ್ಷಣೆಯ ಬಗ್ಗೆ ಮಾತನಾಡಿದರು. ಈ ಸರಳ ಕಾರ್ಯಕ್ರಮದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್.ಎ.ವಿ. ಹಾಗೂ ವಲಯ ಅರಣ್ಯಾಧಿಕಾರಿ ವೈ.ಕೆ.ಕಿರಣ್ ಕುಮಾರ್ ಹಾಗು ಪಶುವೈದ್ಯಾಧಿಕಾರಿ ಡಾ. ಮುಜೀಬ್ ರೆಹಮಾನ್ ಹಾಗು ಭಾವಿಷ್ಯಕುಮಾರ್ ಮತ್ತು ಮತ್ತಿಗೋಡು ಸಾಕಾನೆ ಶಿಬಿರದ ಉಪವಲಯ ಅರಣ್ಯಾಧಿಕಾರಿ, ಅರಣ್ಯ ರಕ್ಷಕಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು. ಆನೆ ದಿನದ ಅಂಗವಾಗಿ ಆನೆಗಳ ಮಾವುತರು ಹಾಗೂ ಕಾವಾಡಿಗಳು ಆನೆಗಳಿಗೆ ಬಣ್ಣ ಹಚ್ಚಿ ಹೂವಿನೊಂದಿಗೆ ಸಿಂಗರಿಸಿದ್ದರು.
-ಕರುಣ್ ಕಾಳಯ್ಯ