ಉಳಿದ ಮೂವರಿಗಾಗಿ ತಲಕಾವೇರಿಯಲ್ಲಿ ಶೋಧ ಕಾರ್ಯ ಚುರುಕು

12/08/2020

ಮಡಿಕೇರಿ ಆ.12 : ಬೆಟ್ಟ ಕುಸಿದು ದುರ್ಘಟನೆ ನಡೆದ ಪ್ರದೇಶದಲ್ಲಿ ನಾಪತ್ತೆಯಾಗಿರುವ ಮೂವರ ಶೋಧ ಕಾರ್ಯ ಮುಂದುವರೆದಿದೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಯ ನಡುವೆಯೂ ಮಡಿಕೇರಿ ವಿಭಾಗದ ಡಿವೈಎಸ್‍ಪಿ ದಿನೇಶ್ ಕುಮಾರ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.
ಪೆÇಲೀಸ್, ಅಗ್ನಿಶಾಮಕ, ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್ ಮತ್ತು ಅರಣ್ಯ ಇಲಾಖೆಯ ರಕ್ಷಣಾ ತಂಡಗಳು ಸ್ಥಳದಲ್ಲೇ ಇದ್ದು, ಶೀಘ್ರ ಪತ್ತೆ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಪ್ರಧಾನ ಅರ್ಚಕ ನಾರಾಯಣ ಆಚಾರ್ ಹಾಗೂ ಆನಂದತೀರ್ಥ ಸ್ವಾಮಿಗಳ ಮೃತ ದೇಹ ಈಗಾಗಲೇ ದೊರೆತ್ತಿದ್ದು, ಶಾಂತ, ರವಿಕಿರಣ್ ಹಾಗೂ ಶ್ರೀನಿವಾಸ ಅವರುಗಳು ಪತ್ತೆಯಾಗಬೇಕಾಗಿದೆ.