ಕಂಬಿಬಾಣೆ ಕುಟ್ಟಿಗೇರಿ ಪೈಸಾರಿಯಲ್ಲಿ ಮಳೆಗೆ ಮನೆ ಬಿದ್ದು ನಷ್ಟ

13/08/2020

ಮಡಿಕೇರಿ ಆ. 13 : ಸುಂಟಿಕೊಪ್ಪ ಕಂಬಿಬಾಣೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಪೊನ್ನತ್ಮೊಟ್ಟೆ ಸಮೀಪದ ಕುಟ್ಟಿಗೇರಿ ಪೈಸಾರಿಯಲ್ಲಿ ಅಂಗವಿಕಲ ವ್ಯಕ್ತಿ ರಿಯಸ್ ಎಂಬವರ ಮನೆ ಮಳೆಗೆ ಬಿದ್ದು ಅಪಾರ ನಷ್ಟ ಉಂಟಾಗಿದೆ.

ರಿಯಸ್ ತಮ್ಮ ತಾಯಿ ಮತ್ತು ಕುಟುಂಬದ ಸಮೇತ ವಾಸವಿದ್ದರು. ರಾತ್ರಿ ಬಿದ್ದ ಬಾರಿ ಮಳೆಯಲ್ಲಿ ಮನೆಯ ಮಾಡಿನಲ್ಲಿ ಸಣ್ಣ ಶಬ್ದ ಉಂಟಾದುದನ್ನು ಗಮನಿಸಿ ತಕ್ಷಣ ಮನೆಯಿಂದ ಕುಟುಂಬದ ಜೊತೆ ಹೊರಗೆ ಬಂದು ಪ್ರಾಣಾಪಾಯದಿಂದ ಪರಾಗಿದ್ದಾರೆ.