ಕೊಡಗಿನಲ್ಲಿ ಸೋಂಕಿತರ ಸಂಖ್ಯೆ 879ಕ್ಕೆ ಏರಿಕೆ

ಮಡಿಕೇರಿ ಆ. 13 : ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8 ಗಂಟೆ ವೇಳೆಗೆ 20 ಹೊಸ ಕೋವಿಡ್ ಪ್ರಕರಣಗಳು ಮತ್ತು ಮಧ್ಯಾಹ್ನ 2 ಗಂಟೆ ವೇಳೆಗೆ 39 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು 59 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಸೋಮವಾರಪೇಟೆಯ ಬಳಗುಂದದ 88 ವರ್ಷದ ಪುರುಷ. ಸೋಮವಾರಪೇಟೆ ಶಾಂತಳ್ಳಿಯ 46 ವರ್ಷದ ಮಹಿಳೆ. ವಿರಾಜಪೇಟೆಯ ಪಂಜರಪೇಟೆಯ ಗಣಪತಿ ಬೀದಿಯ 29 ವರ್ಷದ ಮಹಿಳೆ.
ವಿರಾಜಪೇಟೆ ಬೆಕ್ಕೆಸೊಡ್ಲೂರುವಿನ 48 ವರ್ಷದ ಮಹಿಳೆ. ವಿರಾಜಪೇಟೆಯ ಚೆಂಬೆಬೆಳ್ಳೂರು ರಸ್ತೆಯ 55 ವರ್ಷದ ಮಹಿಳೆ. ಕುಶಾಲನಗರ ಚಿಕ್ಕಣ್ಣ ಲೇಔಟಿನ 20 ವರ್ಷದ ಮಹಿಳೆ. ಕುಶಾಲನಗರದ ಗಂಧದ ಕೋಟೆಯ 27 ವರ್ಷದ ಮಹಿಳೆ ಮತ್ತು 15 ವರ್ಷದ ಬಾಲಕ. ವಿರಾಜಪೇಟೆ ಪೆÇನ್ನಂಪೇಟೆಯ ಕೃಷ್ಣ ಕಾಲೋನಿಯ 33 ವರ್ಷದ ಪುರುಷ. ಮಡಿಕೇರಿ ಭಗವತಿ ನಗರದ 58 ವರ್ಷದ ಪುರುಷ. ಸೋಮವಾರಪೇಟೆ ಮಾದಾಪುರದ ಮುವ್ವತ್ತೊಕ್ಲು ಗ್ರಾಮ ಮತ್ತು ಅಂಚೆಯ 35 ವರ್ಷದ ಪುರುಷ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಗುಂಡೂರಾವ್ ಬಡಾವಣೆಯ 66 ವರ್ಷದ ಮಹಿಳೆ. ಮಡಿಕೇರಿ ಕಾವೇರಿ ಲೇಔಟಿನ 63 ವರ್ಷದ ಮಹಿಳೆ. ಮೈಸೂರಿನ ಕುಮಾರ್ ಬಾರ್ ರಸ್ತೆಯ 44 ವರ್ಷದ ಮಹಿಳೆ.
ಸೋಮವಾರಪೇಟೆ ಚಾಮುಂಡೇಶ್ವರಿ ದೇವಾಲಯ ಹಿಂಭಾಗದ ಜನತಾ ಕಾಲೋನಿಯ 39 ವರ್ಷದ ಮಹಿಳೆ ಮತ್ತು 36 ವರ್ಷದ ಪುರುಷ. ಮಡಿಕೇರಿ ತ್ಯಾಗರಾಜ ಕಾಲೋನಿಯ ಅಂಗನವಾಡಿ ಬಳಿಯ 18 ವರ್ಷದ ಮಹಿಳೆ. ವಿರಾಜಪೇಟೆ ಕಲ್ಲುಬಾಣೆ ಅಂಚೆಯ ಅರ್ಜಿ ಗ್ರಾಮದ 42 ವರ್ಷದ ಪುರುಷ. ಮಡಿಕೇರಿ ನಿಡುಗಣೆ ಗ್ರಾಮದ 68 ವರ್ಷದ ಮಹಿಳೆ. ಮಡಿಕೇರಿ ಮೈತ್ರಿ ಹಾಲ್ ಬಳಿಯ ಪೆÇಲೀಸ್ ವಸತಿ ಗೃಹದ 36 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ವಿರಾಜಪೇಟೆ ತಿತಿಮತಿಯ 35 ವರ್ಷದ ಪುರುಷ ಮತ್ತು 30 ವರ್ಷದ ಮಹಿಳೆ. ಕುಶಾಲನಗರ ಬೈಚನಹಳ್ಳಿಯ ಯೋಗಾನಂದ ಬಡಾವಣೆ ಮುತ್ತಪ್ಪ ದೇವಾಲಯದ ಬಳಿಯ 21 ವರ್ಷದ ಮಹಿಳೆ. ಸೋಮವಾರಪೇಟೆ ಬಸವೇಶ್ವರ ರಸ್ತೆಯ 59 ವರ್ಷದ ಪುರುಷ. ಮಡಿಕೇರಿ ಹಳೆ ರೇಸ್ ಕೋರ್ಸ್ ರಸ್ತೆಯ 32 ವರ್ಷದ ಪುರುಷ. ವಿರಾಜಪೇಟೆ ಸುಂಕದ ಕಟ್ಟೆಯ 46 ವರ್ಷದ ಪುರುಷ.
ವಿರಾಜಪೇಟೆ ಕಲ್ಲುಬಾಣೆ ಅರ್ಜಿ ಗ್ರಾಮದ 51 ವರ್ಷದ ಪುರುಷ. ವಿರಾಜಪೇಟೆ ವಿದ್ಯಾನಗರದ 8 ವರ್ಷದ ಬಾಲಕ. ವಿರಾಜಪೇಟೆ ತಿತಿಮತಿ ಗ್ರಾಮದ ಮಾರ್ಪಾಲದ 40 ವರ್ಷದ ಪುರುಷ. ಮಡಿಕೇರಿ ಅರೆಕಾಡು ಗ್ರಾಮದ 40 ವರ್ಷದ ಪುರುಷ. ಸೋಮವಾರಪೇಟೆ ನಲ್ವತ್ತೆಕ್ರೆ ಗ್ರಾಮದ ಎಸ್‍ಎನ್‍ಡಿಪಿ ಕಟ್ಟಡ ಬಳಿಯ 27 ವರ್ಷದ ಮಹಿಳೆ. ವಿರಾಜಪೇಟೆ ಸಿದ್ದಾಪುರದ ಕರಡಿಗೋಡು ಗ್ರಾಮದ 56 ವರ್ಷದ ಪುರುಷ. ವಿರಾಜಪೇಟೆ ಚಿಕ್ಕಪೇಟೆಯ 32 ಮತ್ತು 20 ವರ್ಷದ ಮಹಿಳೆಯರು. ಸೋಮವಾರಪೇಟೆ ಹಾಲೇರಿಯ ಕಾಂಡನಕೊಲ್ಲಿ ಗ್ರಾಮದ 45 ವರ್ಷದ ಪುರುಷ. ವಿರಾಜಪೇಟೆ ಹೈಸೊಡ್ಲೂರು ಬೆಳ್ಳೂರು ಗ್ರಾಮದ 73 ವರ್ಷದ ಪುರುಷ. ವಿರಾಜಪೇಟೆ ಕಲ್ತೋಡು ಗ್ರಾಮದ ಹಾತೂರು ಕಾಲೋನಿಯ 21 ವರ್ಷದ ಪುರುಷ. ಕುಶಾಲನಗರ ಗಂಧದಕೋಟೆಯ 73 ವರ್ಷದ ಪುರುಷ ಮತ್ತು 3 ವರ್ಷದ ಬಾಲಕ. ಮಡಿಕೇರಿ ಮಹದೇವಪೇಟೆಯ ಚೌಡೇಶ್ವರಿ ದೇವಾಲಯ ಬಳಿಯ 35 ವರ್ಷದ ಪುರುಷ ಮತ್ತು 35 ವರ್ಷದ ಮಹಿಳೆ. ಮಡಿಕೇರಿ ಪುಟಾಣಿನಗರದ ಅಂಗನವಾಡಿ ಬಳಿಯ 34 ವರ್ಷದ ಪುರುಷ. ಮಡಿಕೇರಿ ಉಕ್ಕಡದ 32 ವರ್ಷದ ಪುರುಷ.
ಸೋಮವಾರಪೇಟೆ ನಂಜರಾಯಪಟ್ಟಣ ದಾಸವಾಳ ಪೈಸಾರಿಯ 56 ವರ್ಷದ ಪುರುಷ. ಸೋಮವಾರಪೇಟೆ ಗುಡ್ಡೆಹೊಸೂರುವಿನ 27 ವರ್ಷದ ಪುರುಷ. ಕುಶಾಲನಗರ ಮುತ್ತಪ್ಪ ದೇವಾಲಯ ರಸ್ತೆಯ 18 ವರ್ಷದ ಮಹಿಳೆ. ಕುಶಾಲನಗರ ಕೂಡುಮಂಗಳೂರುವಿನ ಸಾಗರ್ ಸಾಮಿಲ್ ಬಳಿಯ 20 ವರ್ಷದ ಪುರುಷ. ಸೋಮವಾರಪೇಟೆ ದೊಡ್ಡಮಳ್ತೆ ಪಂಚಾಯತ್ ಬಳಿಯ 54 ವರ್ಷದ ಮಹಿಳೆ. ಕುಶಾಲನಗರ ಕೂಡಿಗೆಯ ಮಸೀದಿ ಬಳಿಯ 27 ವರ್ಷದ ಮಹಿಳೆ. ಕುಶಾಲನಗರ ಕೂಡುಮಂಗಳೂರು ಜನತಾ ಕಾಲೋನಿಯ 18 ವರ್ಷದ ಮಹಿಳೆ. ಕುಶಾಲನಗರ ಕೂಡಿಗೆಯ ಡಿಎಟಿಸಿ ವಸತಿ ಗೃಹದ 31 ವರ್ಷದ ಮಹಿಳೆ. ಕುಶಾಲನಗರ ಆದರ್ಶ ದ್ರಾವಿಡ ಕಾಲೋನಿಯ 3ನೇ ಬ್ಲಾಕಿನ 65 ವರ್ಷದ ಮಹಿಳೆ. ಕುಶಾಲನಗರ ದಂಡಿನಪೇಟೆಯ ಮಸೀದಿ ಬಳಿಯ 50 ವರ್ಷದ ಮಹಿಳೆ. ಸೋಮವಾರಪೇಟೆ ಚೌಡ್ಲುವಿನ 3 ವರ್ಷದ ಬಾಲಕಿ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಕುಶಾಲನಗರದ ನಿಜಾಮುದ್ದೀನ್ ಲೇಔಟಿನ 6 ವರ್ಷದ ಬಾಲಕ ಮತ್ತು 41 ವರ್ಷದ ಪುರುಷ. ಮಡಿಕೇರಿ ಮರಗೋಡು ಅಂಚೆಯ ಕತ್ತಲೆಕಾಡು ಜೇನುಕೊಲ್ಲಿ ಪೈಸಾರಿಯ 27 ವರ್ಷದ ಪುರುಷ. ಮಡಿಕೇರಿ ಜೋಡುಪಾಲದ 10 ನೇ ಮೈಲಿನ 27 ವರ್ಷದ ಮಹಿಳೆ. ವಿರಾಜಪೇಟೆ ಗೋಣಿಕೊಪ್ಪ ಮಾಯಮುಡಿ ಬಳಗಿ ಗ್ರಾಮದ 67 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 879 ಆಗಿದ್ದು, 556 ಮಂದಿ ಗುಣಮುಖ ಹೊಂದಿದ್ದಾರೆ. 312 ಸಕ್ರಿಯ ಪ್ರಕರಣಗಳಿದ್ದು, 11 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 263 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
