ವಿದ್ಯುತ್ ಸ್ಪರ್ಶಗೊಂಡು ಎತ್ತುಗಳ ಸಾವು : ಕೆದಕಲ್ ನಲ್ಲಿ ಘಟನೆ

13/08/2020

ಮಡಿಕೇರಿ ಆ.13: ವಿದ್ಯುತ್ ಸ್ಪರ್ಶಗೊಂಡು ಎರಡು ಎತ್ತುಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊರೂರು ಗ್ರಾಮದಲ್ಲಿ ನಡೆದಿದೆ.

ಚೆಪ್ಪುಡಿರ ಸತೀಶ್ ಎಂಬವರಿಗೆ ಸೇರಿದ ಜಾನುವಾರುಗಳನ್ನು ಗುರುವಾರ ಬೆಳಗ್ಗೆ ಕೊಟ್ಟಿಗೆಯಿಂದ ಕಾರ್ಮಿಕರು ಮೇಯಲು ಕರೆದುಕೊಂಡು ಹೋಗುತಿದ್ದ ಸಂದರ್ಭ ರಸ್ತೆಯಲ್ಲಿ ಬಿದಿದ್ದ ವಿದ್ಯುತ್ ತಂತಿ ಸ್ಪರ್ಷಗೊಂಡು ದುರ್ಘಟನೆ ಸಂಭವಿಸಿದೆ. ಮೃತ ಎತ್ತುಗಳ ಮೌಲ್ಯ 1 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಸ್ಥಳಕ್ಕೆ ಸುಂಟಿಕೊಪ್ಪ ಠಾಣಾಧಿಕಾರಿ ವೆಂಕಟರಾಮಣ ಹಾಗೂ ಸಿಬ್ಬಂದಿಗಳು, ಚೆಸ್ಕಾಂ ಅಧಿಕಾರಿಗಳು, ಪಶು ವೈದ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.