ಡಿಪ್ಲೋಮಾ ಕೋರ್ಸುಗಳ ಪ್ರವೇಶಕ್ಕೆ ವಿಶೇಷ ಚೇತನರಿಂದ ಅರ್ಜಿ ಆಹ್ವಾನ

13/08/2020

ಮಡಿಕೇರಿ ಆ.13 : 2020-21 ನೇ ಸಾಲಿಗೆ ಮೂರು ವರ್ಷಗಳ ಅವಧಿಯ ಡಿಪ್ಲೋಮಾ ಕೋರ್ಸುಗಳ ಪ್ರವೇಶಕ್ಕೆ (ಅಖಿಲ ಭಾರತ ಮಟ್ಟದಲ್ಲಿ) ವಿಶೇಷ ಚೇತನ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆರ್ಕಿಟೆಕ್ಚರ್, ಕಮರ್ಷಿಯಲ್ ಪ್ರಾಕ್ಟೀಸ್, ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್, ಜ್ಯುಯಲರಿ ಡಿಸೈನ್ ಮತ್ತು ಟೆಕ್ನಾಲಜಿ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್, ಕಂಪ್ಯೂಟರ್ ಅಪ್ಲಿಕೇಷನ್ಸ್ ಫಾರ್ ದಿ ವಿಷ್ಯುಯಲಿ ಇಂಪೇರ್ಡ್.
ಕರ್ನಾಟಕ ಎಸ್‍ಎಸ್‍ಎಲ್‍ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ ಶೇ.35 ಅಂಕಗಳೊಂದಿಗೆ ತೇರ್ಗಡೆ ಹಾಗೂ ಅಂಗವೈಕಲ್ಯತೆಯ ಲಕ್ಷಣಗಳನ್ನು ಹೊಂದಿರಬೇಕು. ಮೂಳೆ ಮತ್ತು ಕೀಲು ಅಂಗವಿಕಲತೆ ಶೇ.40 ಮತ್ತು ಮೇಲ್ಪಟ್ಟು, ಕಿವುಡು ಮತ್ತು ಮೂಗು ಅಂಗವಿಕಲತೆ-60 ಡಿಬಿ ಮತ್ತು ಮೇಲ್ಪಟ್ಟು, ಭಾಗಶಃ ಮತ್ತು ಪೂರ್ಣ ಅಂಧತ್ವ ಜ್ಯುಯಲರಿ ಡಿಸೈನ್ ಮತ್ತು ಟೆಕ್ನಾಲಜಿ ಕೋರ್ಸಿಗೆ ಸಾಮಾನ್ಯ (ವಿಶೇಷಚೇತನರಲ್ಲದ) ಅಭ್ಯರ್ಥಿಗಳೂ ಸಹ ಜೆಎಸ್‍ಎಸ್ ಮಹಾವಿದ್ಯಾಪೀಠದ ಯೋಜನೆಯಡಿಯಲ್ಲಿ ಪ್ರವೇಶ ಪಡೆಯಬಹುದು.
ಅರ್ಹ ವಿದ್ಯಾರ್ಥಿಗಳಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ವಿದ್ಯಾರ್ಥಿವೇತನದ ಆರ್ಥಿಕ ಸಹಾಯ ದೊರೆಯುತ್ತದೆ. ಪಾಲಿಟೆಕ್ನಿಕ್‍ನ ಯಶಸ್ವಿ ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ತರಬೇತಿ ಕೇಂದ್ರದ ಮೂಲಕ ಉದ್ಯೋಗಾವಕಾಶವನ್ನು ಕಲ್ಪಿಸಿಕೊಡಲಾಗುತ್ತಿದೆ. ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರುಗಳಿಗೆ ಪ್ರತ್ಯೇಕ ವಿದ್ಯಾರ್ಥಿನಿಲಯದ ಸೌಲಭ್ಯ ಕಲ್ಪಿಸಲಾಗಿದೆ.
ಪ್ರವೇಶಕ್ಕೆ ಅರ್ಜಿ(ಸಾಮಾನ್ಯ ವರ್ಗದ ಅಭ್ಯರ್ಥಿಗಳು ರೂ.100 ಹಾಗೂ ಎಸ್‍ಸಿ, ಎಸ್‍ಟಿ, ಸಿ-1 ವರ್ಗದವರಿಗೆ ರೂ.50) ನಗದು ಅಥವಾ ಡಿಡಿ /ಎಂಒ ಮೂಲಕ ದಿ ಪ್ರಿನ್ಸಿಪಾಲ್, ಜೆಎಸ್‍ಎಸ್‍ಪಿಡಿಎ, ಮೈಸೂರು ಇವರ ಹೆಸರಿಗೆ ಮೈಸೂರಿನಲ್ಲಿ ಸಂದಾಯವಾಗುವಂತೆ ಕಳುಹಿಸಿ ಪಡೆಯಬಹುದು ಅಥವಾ ವೆಬ್‍ಸೈಟ್ ಮೂಲಕ ಡೌನ್‍ಲೋಡ್ ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್ www.jsspda.org / ಇ-ಮೇಲ್ / ದೂರವಾಣಿ ಮೂಲಕ ಸಂಪರ್ಕಿಸಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಸೆಪ್ಟೆಂಬರ್, 12 ರೊಳಗೆ ಕಚೇರಿಗೆ ತಲುಪಿಸತಕ್ಕದ್ದು.
ಪ್ರವೇಶಕ್ಕೆ ಬೇಕಾದ ಅರ್ಹತೆಗಳು: ಕರ್ನಾಟಕ ಎಸ್‍ಎಸ್‍ಎಲ್‍ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಮೂಳೆ ಮತ್ತು ಕೀಲು ಅಂಗವಿಕಲತೆ ಇದ್ದರೆ ಶೇ.40 ಕ್ಕಿಂತ ಹೆಚ್ಚಿರಬೇಕು. ಶ್ರವಣ ದೋಷವಿದ್ದರೆ 60 ಡಿಬಿ ಗಿಂತ ಹೆಚ್ಚಿರಬೇಕು. ಪೂರ್ಣ ಅಥವಾ ಭಾಗಶಃ ಅಂಧತ್ವವುಳ್ಳ ವಿದ್ಯಾರ್ಥಿಗಳಾಗಿರಬೇಕು( ಕ್ರಮ ಸಂಖ್ಯೆ 6ನೇ ಕೋರ್ಸಿಗೆ). ಭಾಗಶಃ ಅಂಧತ್ವ 6/60 ಅಥವಾ 20/200 ಸ್ನೆಲೆನ್. ತಜ್ಞರನ್ನೊಳಗೊಂಡ ಸಮಿತಿಯಿಂದ ಸರ್ಕಾರದ ನಿಯಮಾವಳಿಗಳ ಪ್ರಕಾರ ಕೋರ್ಸುಗಳ ಪ್ರವೇಶಕ್ಕೆ ವಿದ್ಯಾರ್ಥಿಗಳ ಆಯ್ಕೆಯನ್ನು ನಡೆಸಲಾಗುವುದು.
ಮುಖ್ಯಾಂಶಗಳು: ಶಾಲಾ ಕಟ್ಟಡ, ಪ್ರಯೋಗಾಲಯ ಮತ್ತು ತರಬೇತಿ ಕೊಠಡಿಗಳನ್ನು ವಿಶೇಷಚೇತನರಿಗೆ ಸರಿ ಹೊಂದುವಂತೆ ರೂಪಿಸಲಾಗಿದೆ. ಹಾಸ್ಟೆಲ್ ಸೌಲಭ್ಯವನ್ನು ಒದಗಿಸಲಾಗಿದೆ. ಕರ್ನಾಟಕ ಸರ್ಕಾರ ಮತ್ತು ಭಾರತ ಸರ್ಕಾರಗಳ ನಿಯಮಾನುಸಾರವಾಗಿ ವಿದ್ಯಾರ್ಥಿವೇತನ ಸೌಲಭ್ಯವಿರುತ್ತದೆ. ಉತ್ತಮ ಗ್ರಂಥಾಲಯ ವ್ಯವಸ್ಥೆಯನ್ನು ಮಾಡಲಾಗಿದೆ.
ವಿಶೇಷಚೇತನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬ್ಯಾಂಕ್ ಸೌಲಭ್ಯ ಮತ್ತು ಆರೋಗ್ಯ ಕೇಂದ್ರದ ವ್ಯವಸ್ಥೆಗಳನ್ನು ಮಾಡಲಾಗಿದೆ
ಹೆಚ್ಚಿನ ವಿವರಗಳಿಗೆ ಪ್ರಾಂಶುಪಾಲರು ಜೆಎಸ್‍ಎಸ್ ವಿಶೇಷಚೇತನರ ಪಾಲಿಟೆಕ್ನಿಕ್, ಜೆಎಸ್‍ಎಸ್ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಸಮುಚ್ಛಯ ಮೈಸೂರು 570006, ದೂರವಾಣಿ 0821-2548315, 2548316 ಇ-ಮೇಲ್: jsspda@gmail.com, website: WWW.jsspda.org ನ್ನು ಸಂಪರ್ಕಿಸಬಹುದು ಎಂದು ಮೈಸೂರು ಜೆಎಸ್‍ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ಜೆಎಸ್‍ಎಸ್ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು ತಿಳಿಸಿದ್ದಾರೆ.