ಶುಕ್ರವಾರದ ಪೂಜೆಗಾಗಿ ಹಿಂದೂ ಜಾಗರಣಾ ವೇದಿಕೆಯಿಂದ ಶುಚಿಯಾಯಿತು ತಲಕಾವೇರಿ ಕ್ಷೇತ್ರ

ಮಡಿಕೇರಿ ಆ.13 : ಕೊಡಗಿನ ಪುಣ್ಯಕ್ಷೇತ್ರ ತಲಕಾವೇರಿಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ಕೈಗೊಂಡರು. ಯಾರೂ ನಿರೀಕ್ಷಿಸದ ರೀತಿಯಲ್ಲಿ ಭೂಕುಸಿತ ಸಂಭವಿಸಿ ದೇವಾಲಯದ ಅರ್ಚಕರುಗಳು ಮತ್ತವರ ಕುಟುಂಬಸ್ಥರು ಸೇರಿದಂತೆ ಜಾನುವಾರುಗಳ ಪ್ರಾಣಹಾನಿ ಸಂಭವಿಸಿತ್ತು.
ದೇವಾಲಯದಲ್ಲಿ ಶುಕ್ರವಾರದಿಂದಲೇ ಹೋಮ, ಹವನ, ವಿಶೇಷ ಪೂಜಾ ವಿಧಿವಿಧಾನಗಳೊಂದಿಗೆ ನಿತ್ಯ ಪೂಜೆಗೆ ಚಾಲನೆ ದೊರೆಯಲಿದೆ. ಈ ಹಿನ್ನೆಲೆಯಲ್ಲಿ ಈ ದಿನ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಸ್ಥಳೀಯ ವಲಯಾಧ್ಯಕ್ಷರಾದ ನಿಡ್ಯಮಲೆ ಚಲನ್ ರವರ ನೇತೃತ್ವದಲ್ಲಿ ದೇವಾಲಯದ ಆವರಣವನ್ನು ಶುಚಿಗೊಳಿಸಿದರು. ಕೆಸರುಮಯ ರಸ್ತೆಯಲ್ಲಿ ಸಾಗಿ ಶ್ರಮದಾನ ನಡೆಸಿದರು.
ಹಿಂದು ಜಾಗರಣ ವೇದಿಕೆಯ ಕೊಡಗು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಕೆ.ಮಹೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಕ್ಕೇರ ಅಜಿತ್, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಪೊನ್ನಪ್ಪ, ಮಾತೃ ಸುರಕ್ಷಾ ಪ್ರಮುಖ್ ಬಿದ್ದಂಡ ಮನು ಸಂದೇಶ್ ಸೇರಿದಂತೆ ಅಯ್ಯಂಗೇರಿ, ಭಾಗಮಂಡಲದ ಕಾರ್ಯಕರ್ತರು ಪಾಲ್ಗೊಂಡಿದ್ದರು.