ತಲಕಾವೇರಿ ಬೆಟ್ಟ ಕುಸಿದ ಪ್ರದೇಶಕ್ಕೆ ಪೊಲೀಸ್ ಮಹಾ ನಿರೀಕ್ಷಕ ವಿಪುಲ್ ಕುಮಾರ್ ಭೇಟಿ

13/08/2020

ಮಡಿಕೇರಿ ಆ.13 : ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಸಂಭವಿಸಿದ ಭೂಕುಸಿತ ಸ್ಥಳಕ್ಕೆ ಇಂದು ದಕ್ಷಿಣ ವಲಯದ ಪೊಲೀಸ್ ಮಹಾ ನಿರೀಕ್ಷಕ ವಿಪುಲ್ ಕುಮಾರ್ ಅವರು ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.  ಘಟನೆಯಲ್ಲಿ ಕಾಣೆಯಾದವರಲ್ಲಿ  ಇನ್ನು ಮೂವರು ಪತ್ತೆಯಾಗಬೇಕಾಗಿದ್ದು ಅವರ ಪತ್ತೆಕಾರ್ಯದಲ್ಲಿ NDRF, SDRF, ಪೊಲೀಸ್, ಅಗ್ನಿಶಾಮಕ ಮತ್ತು ಅರಣ್ಯಿ ಇಲಾಖೆಯ ತಂಡದವರು ತೊಡಗಿಸಿಕೊಂಡಿದ್ದಾರೆ. ಅವರುಗಳಿಗೆ ಐ.ಜಿ.ಪಿ. ಯವರು ಸಲಹೆ ಸೂಚನೆಗಳನ್ನು ನೀಡಿದರು.