ಕೊಡಗಿನಲ್ಲಿ 20 ಹೊಸ ಸೋಂಕಿತರು ಪತ್ತೆ : 579 ಮಂದಿ ಗುಣಮುಖ

14/08/2020

ಮಡಿಕೇರಿ ಆ. 14 : ಜಿಲ್ಲೆಯಲ್ಲಿ ಶುಕ್ರವಾರ 20 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದೆ.
ವಿರಾಜಪೇಟೆಯ ಸಿದ್ದಾಪುರದ ಅಂಬೇಡ್ಕರ್ ನಗರದ 21 ವರ್ಷದ ಪುರುಷ, 16 ವರ್ಷದ ಬಾಲಕ 13 ವರ್ಷದ ಬಾಲಕಿ.
ವಿರಾಜಪೇಟೆ ಕೊಣ್ಣಂಗೇರಿಯ 34 ವರ್ಷದ ಪುರುಷ.
ವಿರಾಜಪೇಟೆ ಅರಸು ನಗರದ 20 ವರ್ಷದ ಮಹಿಳೆ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಗೋಣಿಕೊಪ್ಪ ಪೆÇನ್ನಂಪೇಟೆ ರಸ್ತೆಯ ಉತ್ತಯ್ಯ ಕ್ಯಾಂಪಸ್ಸಿನ 45 ವರ್ಷದ ಪುರುಷ.
ಗೋಣಿಕೊಪ್ಪ ಕೆಇಬಿ ಹಿಂಬಾಗದ 55 ವರ್ಷದ ಪುರುಷ.
ಗೋಣಿಕೊಪ್ಪ ಕೆಇಬಿ ವಸತಿ ಗೃಹದ 57 ವರ್ಷದ ಪುರುಷ.
ಮಡಿಕೇರಿ ಜೋಡುಪಾಲದ 10ನೇ ಮೈಲಿ ಬಳಿಯ 30 ವರ್ಷದ ಪುರುಷ ಮತ್ತು 57 ವರ್ಷದ ಮಹಿಳೆ.
ಮಡಿಕೇರಿ ಬ್ರಾಹ್ಮಿಣ್ ವ್ಯಾಲಿಯ 55 ಮತ್ತು 20 ವರ್ಷದ ಪುರುಷ.
ಕರ್ಣಂಗೇರಿ ಮಕ್ಕಂದೂರಿನ ಉದಯಗಿರಿ ಬಳಿಯ 33 ವರ್ಷದ ಪುರುಷ, 31 ವರ್ಷದ ಮಹಿಳೆ, 11 ಮತ್ತು 12 ವರ್ಷದ ಬಾಲಕಿಯರು.
ಮಡಿಕೇರಿ ಓಂಕಾರೇಶ್ವರ ದೇವಾಲಯ ಬಳಿಯ 59 ವರ್ಷದ ಮಹಿಳೆ ಮತ್ತು 60 ವರ್ಷದ ಪುರುಷ.
ಮಡಿಕೇರಿ ಮುತ್ತಪ್ಪ ದೇವಾಲಯ ಬಳಿಯ 26 ವರ್ಷದ ಮಹಿಳೆ.
ಕುಶಾಲನಗರ ನಿಜಾಮುದ್ದೀನ್ ಲೇಔಟಿನ 10 ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 899 ಆಗಿದ್ದು, 579 ಮಂದಿ ಗುಣಮುಖರಾಗಿದ್ದಾರೆ. 309 ಸಕ್ರಿಯ ಪ್ರಕರಣಗಳಿದ್ದು, 11 ಮರಣ ಪ್ರಕರಣಗಳು ವರದಿಯಾಗಿದೆ.
ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 249 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.