ಪಾರದರ್ಶಕ ತೆರಿಗೆ ವೇದಿಕೆ ಉದ್ಘಾಟನೆ

August 14, 2020

ನವದೆಹಲಿ ಆ.14 : ಪ್ರಧಾನಮಂತ್ರಿ ನರೇಂದ್ರ ಮೋದಿ ಗುರುವಾರ “ಪಾರದರ್ಶಕ ತೆರಿಗೆ-ಪ್ರಾಮಾಣಿಕರಿಗೆ ಗೌರವ ವೇದಿಕೆ” ಉದ್ಘಾಟಿಸುವ ಮೂಲಕ ತೆರಿಗೆ ಸುಧಾರಣೆ ನಿಟ್ಟಿನಲ್ಲಿ ಹೊಸ ಅಧ್ಯಾಯ ಬರೆಯಲು ಮುಂದಾಗಿದ್ದಾರೆ. ಇದರಿಂದ ತೆರಿಗೆ ವ್ಯವಸ್ಥೆ ಸುಧಾರಣೆಯಾಗುವುದಲ್ಲದೆ, ಪಾವತಿ ವಿಧಾನವನ್ನು ಸರಳಗೊಳಿಸುತ್ತದೆ ಎಂದು ಮೋದಿ ಹೇಳಿದ್ದಾರೆ.
ಇನ್ನು ನೇರ ತೆರಿಗೆ ಸುಧಾರಣೆಯ ಮುಂದಿನ ಹಂತವಾದ ತೆರಿಗೆ ಪಾವತಿ ವಿಧಾನದಲ್ಲಿರುವ ಕ್ಲಿಷ್ಟತೆಯನ್ನು ಸರಳಗೊಳಿಸುವ ಮತ್ತು ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಪ್ರಶಂಸೆ, ಕೊಡುಗೆ ನೀಡುವ ತೆರಿಗೆ ಪಾವತಿದಾರರ ಚಾರ್ಟರ್ ಮತ್ತು ಫೇಸ್ ಲೆಸ್ ಮೌಲ್ಯಮಾಪನವನ್ನು ಅನಾವರಣಗೊಳಿಸಿದರು. ಕೋವಿಡ್-19ನ ಆರ್ಥಿಕ ಸಂಕಷ್ಟದ ಈ ಸಮಯದಲ್ಲಿ ಅರ್ಥವ್ಯವಸ್ಥೆಯನ್ನು ಮರು ನಿರ್ಮಾಣ ಮಾಡುವಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

error: Content is protected !!