ಕೊಡಗಿನಲ್ಲಿ ಸೋಂಕಿತರ ಸಂಖ್ಯೆ 922ಕ್ಕೆ ಏರಿಕೆ : ಸಕ್ರಿಯ ಪ್ರಕರಣ 332

14/08/2020

ಮಡಿಕೇರಿ ಆ. 14 : ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8 ಗಂಟೆ ವೇಳೆಗೆ 20 ಹೊಸ ಕೋವಿಡ್ ಪ್ರಕರಣಗಳು ಮತ್ತು ಮಧ್ಯಾಹ್ನ 2 ಗಂಟೆ ವೇಳೆಗೆ 23 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು 43 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ವಿರಾಜಪೇಟೆಯ ಸಿದ್ದಾಪುರದ ಅಂಬೇಡ್ಕರ್ ನಗರದ 21 ವರ್ಷದ ಪುರುಷ, 16 ವರ್ಷದ ಬಾಲಕ 13 ವರ್ಷದ ಬಾಲಕಿ. ವಿರಾಜಪೇಟೆ ಕೊಣ್ಣಂಗೇರಿಯ 34 ವರ್ಷದ ಪುರುಷ. ವಿರಾಜಪೇಟೆ ಅರಸು ನಗರದ 20 ವರ್ಷದ ಮಹಿಳೆ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಗೋಣಿಕೊಪ್ಪ ಪೆÇನ್ನಂಪೇಟೆ ರಸ್ತೆಯ ಉತ್ತಯ್ಯ ಕ್ಯಾಂಪಸ್ಸಿನ 45 ವರ್ಷದ ಪುರುಷ. ಗೋಣಿಕೊಪ್ಪ ಕೆಇಬಿ ಹಿಂಬಾಗದ 55 ವರ್ಷದ ಪುರುಷ. ಗೋಣಿಕೊಪ್ಪ ಕೆಇಬಿ ವಸತಿ ಗೃಹದ 57 ವರ್ಷದ ಪುರುಷ. ಮಡಿಕೇರಿ ಜೋಡುಪಾಲದ 10ನೇ ಮೈಲಿ ಬಳಿಯ 30 ವರ್ಷದ ಪುರುಷ ಮತ್ತು 57 ವರ್ಷದ ಮಹಿಳೆ. ಮಡಿಕೇರಿ ಬ್ರಾಹ್ಮಿಣ್ ವ್ಯಾಲಿಯ 55 ಮತ್ತು 20 ವರ್ಷದ ಪುರುಷ. ಕಣರ್ಂಗೇರಿ ಮಕ್ಕಂದೂರಿನ ಉದಯಗಿರಿ ಬಳಿಯ 33 ವರ್ಷದ ಪುರುಷ, 31 ವರ್ಷದ ಮಹಿಳೆ, 11 ಮತ್ತು 12 ವರ್ಷದ ಬಾಲಕಿಯರು. ಮಡಿಕೇರಿ ಓಂಕಾರೇಶ್ವರ ದೇವಾಲಯ ಬಳಿಯ 59 ವರ್ಷದ ಮಹಿಳೆ ಮತ್ತು 60 ವರ್ಷದ ಪುರುಷ. ಮಡಿಕೇರಿ ಮುತ್ತಪ್ಪ ದೇವಾಲಯ ಬಳಿಯ 26 ವರ್ಷದ ಮಹಿಳೆ. ಕುಶಾಲನಗರ ನಿಜಾಮುದ್ದೀನ್ ಲೇಔಟಿನ 10 ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದೆ.
ಮಡಿಕೇರಿ ಹೆರವನಾಡು ಗ್ರಾಮದ ಅಪ್ಪಂಗಳದ 38 ವರ್ಷದ ಮಹಿಳೆ. ಕುಶಾಲನಗರ ಗುಂಡೂರಾವ್ ಬಡಾವಣೆಯ 1ನೇ ಬ್ಲಾಕಿನ 58 ವರ್ಷದ ಪುರುಷ. ಸೋಮವಾರಪೇಟೆ ಗೌಡಳ್ಳಿ ಗಣೇಶ ದೇವಾಲಯ ಸಮೀಪದ 30 ವರ್ಷದ ಪುರುಷ. ಸೋಮವಾರಪೇಟೆ ಆರೋಗ್ಯ ವಸತಿ ಗೃಹದ 33 ವರ್ಷದ ಮಹಿಳೆ ಮತ್ತು 5 ವರ್ಷದ ಬಾಲಕ. ಸೋಮವಾರಪೇಟೆ ಶನಿವಾರಸಂತೆಯ ಸಹಕಾರಿ ಬ್ಯಾಂಕ್ ಬಳಿಯ 39 ವರ್ಷದ ಪುರುಷ. ಸೋಮವಾರಪೇಟೆ ಶನಿವಾರಸಂತೆಯ 22 ಮತ್ತು 47 ವರ್ಷದ ಪುರುಷರು. ಸೋಮವಾರಪೇಟೆ ಶನಿವಾರಸಂತೆಯ 49 ವರ್ಷದ ಪುರುಷ. ಕುಶಾಲನಗರ ಐಬಿ ಹಿಂಭಾದ ಸಿದ್ದಯ್ಯ ಪುರಾಣಿಕ್ ಲೇಔಟಿನ 30 ವರ್ಷದ ಮಹಿಳೆ. ಪೆÇನ್ನಂಪೇಟೆ ಬೇಗೂರಿನ 37 ವರ್ಷದ ಪುರುಷ. ಸೋಮವಾರಪೇಟೆ ನಲ್ವತ್ತೆಕ್ರೆ ಗ್ರಾಮದ ಮಸೀದಿ ಬಳಿಯ 39 ವರ್ಷದ ಪುರುಷ.
ವಿರಾಜಪೇಟೆ ಪೆÇನ್ನಂಪೇಟೆಯ ಅರಣ್ಯ ಕಾಲೇಜು ವಸತಿ ಗೃಹದ 24 ವರ್ಷದ ಮಹಿಳೆ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ವಿರಾಜಪೇಟೆಯ ಕಲ್ಲುಬಾಣೆ ಅರ್ಜಿ ಗ್ರಾಮದ 45 ವರ್ಷದ ಪುರುಷ ಮತ್ತು 29 ವರ್ಷದ ಮಹಿಳೆ. ಕುಶಾಲನಗರ ನೆಹರು ಲೇಔಟಿನ 46 ವರ್ಷದ ಪುರುಷ, 33 ವರ್ಷದ ಮಹಿಳೆ ಮತ್ತು 10 ವರ್ಷದ ಬಾಲಕಿ. ಮಡಿಕೇರಿ ಮಲ್ಲಿಕಾರ್ಜುನ ನಗರದ 27 ವರ್ಷದ ಪುರುಷ. ಮಡಿಕೇರಿ ಮುತ್ತಪ್ಪ ದೇವಾಲಯ ಬಳಿಯ ಸಂತ ಜೋಸೆಫರ ಶಾಲೆ ರಸ್ತೆಯ 24 ವರ್ಷದ ಪುರುಷ. ವಿರಾಜಪೇಟೆ ಕಲ್ತೋಡು ಗ್ರಾಮ ಅಂಚೆಯ 23 ವರ್ಷದ ಪುರುಷ. ಸೋಮವಾರಪೇಟೆ ಆರೋಗ್ಯ ವಸತಿ ಗೃಹದ 36 ವರ್ಷದ ಪುರುಷ. ಸುಂಟಿಕೊಪ್ಪ ಹರದೂರುವಿನ 36 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 922 ಆಗಿದ್ದು, 579 ಮಂದಿ ಗುಣಮುಖರಾಗಿದ್ದಾರೆ. 332 ಸಕ್ರಿಯ ಪ್ರಕರಣಗಳಿದ್ದು, 11 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 262 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.