ಗರಗಂದೂರು ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ

14/08/2020

ಮಡಿಕೇರಿ ಆ.14 :-ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜು, ಗರಗಂದೂರು, ಸೋಮವಾರಪೇಟೆ ತಾಲ್ಲೂಕು, ಕೊಡಗು ಜಿಲ್ಲೆ ಇಲ್ಲಿ ಪ್ರಥಮ ಪಿ.ಯು.ಸಿ. ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಮೆರೀಟ್ ಆಧಾರದ ಮೇಲೆ ಪ್ರಥಮ ಪಿ.ಯು.ಸಿ. ತರಗತಿಗಳಿಗೆ ಆಯ್ಕೆ ಮಾಡಲಾಗುತ್ತದೆ. ಸುಸಜ್ಜಿತವಾದ ಕಾಲೇಜು ಕಟ್ಟಡ, ಹಾಗೂ ಕಾಲೇಜಿನ ಸುತ್ತ ಮುತ್ತ ಉತ್ತಮ ಪರಿಸರ ಹೊಂದಿದ್ದು, ವ್ಯವಸ್ಥಿತವಾದ ಪ್ರಯೋಗಾಲಯ ಹೊಂದಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 22 ಕಡೆ ದಿನವಾಗಿದೆ.
ಕಾಲೇಜಿನಲ್ಲಿ ಉಚಿತ ಶಿಕ್ಷಣ, ವಸತಿ, ಊಟ, ಸಮವಸ್ತ್ರ, ಪಠ್ಯಪುಸ್ತಕ, ಲೇಖನ ಸಾಮಾಗ್ರಿಗಳು, ಮತ್ತು ಇತರೆ ಸೌಲಭ್ಯವನ್ನು ನೀಡಲಾಗಿದ್ದು, ಜೊತೆಗೆ .ಸಿಇಟಿ, ಎನ್‍ಇಟಿ, ಜೆಇಇ, ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮ ಮತ್ತು ಅನುಭವ ಹೊಂದಿರುವ ಉಪನ್ಯಾಸಕರಿಂದ ತರಗತಿ ನಡೆಸಲಾಗುವುದು. ಹೆಚ್ಚಿನ ಮಾಹಿತಿಗೆ ಕಾಲೇಜಿನ ಪ್ರಾಂಶುಪಾಲರಾದ ಲೋಕೇಶ್ (9611307646) ಅವರನ್ನು ಸಂಪರ್ಕಿಸಬಹುದಾಗಿದೆ.