ಕುಟ್ಟದಲ್ಲಿ ಆ. 15 ರಂದು ಹಾಲು ಉತ್ಪಾದನೆ ಮತ್ತು ಮಾರುಕಟ್ಟೆ ಕುರಿತು ವಿಚಾರ ಸಂಕಿರಣ
14/08/2020

ಕುಟ್ಟದಲ್ಲಿ ಆ. 15 ರಂದು ಹಾಲು ಉತ್ಪಾದನೆ ಮತ್ತು ಮಾರುಕಟ್ಟೆ ಕುರಿತು ವಿಚಾರ ಸಂಕಿರಣ
ಮಡಿಕೇರಿ ಆ. 14 : ಕುಟ್ಟ ಸುತ್ತಮುತ್ತಲ ಗ್ರಾಮಗಳ ರೈತರ ಆರ್ಥಿಕ ಸುಧಾರಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೈನುಗಾರಿಕೆಯ ಪೂರ್ಣ ಲಾಭ ಪಡೆಯಲು ಸಹಕಾರಿಯಾಗಿವಂತೆ ಕುಟ್ಟಾದ ಅನುಗ್ರಹ ಹೆಚ್‍ಪಿ ಪೆಟ್ರೋಲಿಯಂನ ಸಹಕಾರದೊಂದಿಗೆ ‘ಹಾಲು ಉತ್ಪಾದನೆ ಮತ್ತು ಮಾರುಕಟ್ಟೆ’ ಕುರಿತು ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಸ್ವಾತಂತ್ರೋತ್ಸವ ಪ್ರಯುಕ್ತ ಆ. 15 ರಂದು ಬೆಳಿಗ್ಗೆ 10.30ಕ್ಕೆ ಏರ್ಪಡಿಸಿದ್ದು, ಅಮ್ಮತಿ ನಾಡು ಹಾಲು ಉತ್ಪಾದಕರ ಸಂಘದ ನಿಯೋಜಿತ ಅಧ್ಯಕ್ಷ ತುಷಾರ್ ಕುಲಕರ್ಣಿ ಮಾತನಾಡಲಿದ್ದಾರೆ.
