ಅರೆಕಾಡುವಿನಲ್ಲಿ ಮನೆಯ ಅಂಗಳಕ್ಕೆ ಬಂದ ಕಾಡಾನೆಗಳು

14/08/2020

ಮಡಿಕೇರಿ ಆ. 15 : ದಿನಂಪ್ರತಿ ತೋಟ-ಗದ್ದೆಗಳಿಗೆ ಹಿಂಡು ಹಿಂಡಾಗಿ ಆಗಮಿಸಿ ಕೃಷಿ ಫಸಲುಗಳನ್ನು ಧ್ವಂಸಗೊಳಿಸುತ್ತಿರುವ ಕಾಡಾನೆಗಳು ಇದೀಗ ಗಾಳಿ, ಮಳೆಯ ನಡುವೆ ಮನೆಯ ಅಂಗಳಕ್ಕೆ ಲಗ್ಗೆಯಿಡುತ್ತಿವೆ.
ಅರೆಕಾಡು ಗ್ರಾಮದ ನಿವಾಸಿ ಬಿದ್ದಂಡ ಭೀಮಯ್ಯ ಅವರ ಮನೆಯ ಅಂಗಳಕ್ಕೆ ಬಂದಿರುವ ಕಾಡಾನೆ, ಮನೆಯ ಒತ್ತಿನಲ್ಲಿದ್ದ ಹೂ ಕುಂಡಗಳು, ಮತ್ತಿತರ ಸಾಮಾಗ್ರಿಗಳನ್ನು ಎಳೆದಾಡಿದೆ.
ಆನೆಗಳ ಉಪಟಳದ ಬಗ್ಗೆ ಅರಣ್ಯ ಇಲಾಖೆಗೆ ತಿಳಿಸಲಾಗಿದ್ದು, ಸಿಬ್ಬಂದಿಗಳು ಆಗಮಿಸಿ ತೆರಳುತ್ತಿದ್ದಾರೆ ಹೊರತಾಗಿ ಆನೆಗಳ ಉಪಟಳ ಕಡಿಮೆಯಾಗಿಲ್ಲ ಎಂದು ಗ್ರಾಮಸ್ಥರು ಬೇಸಾರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಇಲಾಖೆ ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿ, ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು.