ಬೆಸೂರು ವ್ಯಾಪ್ತಿಯಲ್ಲಿ ಕತ್ತಲೆಯ ಬದುಕು : ಕ್ರಮ ಕೈಗೊಳ್ಳಲು ಗ್ರಾಮಸ್ಥರ ಒತ್ತಾಯ

August 14, 2020

ಮಡಿಕೇರಿ ಆ. 15 : ಭಾರೀ ಗಾಳಿ ಮಳೆಯಿಂದಾಗಿ ಹಲವಾರು ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದಿರುವ ಹಿನ್ನೆಲೆ, ಕೊಡ್ಲಿಪೇಟೆ ಹೋಬಳಿಯ ಬೆಸೂರು ವ್ಯಾಪ್ತಿಯಲ್ಲಿ ಕಳೆದ ಹಲವು ದಿನಗಳಿಂದ ಗ್ರಾಮಸ್ಥರು ಕತ್ತಲೆಯ ಬದುಕು ಸಾಗಿಸುತ್ತಿದ್ದಾರೆ.
ಬೆಸೂರು ವ್ಯಾಪ್ತಿಯ ಗ್ರಾಮಗಳಾದ ಕಟ್ಟೆಪುರ, ನಿಲುವಾಗಿಲು, ಕಾಫಿಕಣ, ಆಗಳಿ ಗ್ರಾಮಗಳಿಗೆ ಕಳೆದ 9 ದಿನಗಳಿಂದ ವಿದ್ಯುತ್ ಸ್ಥಗಿತಗೊಂಡಿದ್ದು, ಈ ವ್ಯಾಪ್ತಿಯ ಸುಮಾರು 300 ಮನೆಗಳು ಕತ್ತಲೆಯಲ್ಲಿದೆ.
11 ಕೆ.ವಿ. ವಿದ್ಯುತ್ ಮಾರ್ಗವೂ ದುರಸ್ತಿಯಾಗದ ಹಿನ್ನೆಲೆ ಇಲ್ಲಿರುವ ಮನೆಗಳಿಗೆ ಕುಡಿಯುವ ನೀರು ಸರಬರಾಜು ಸ್ಥಗಿತಗೊಂಡಿದೆ.
ಆದ್ದರಿಂದ ಸಂಬಂಧಿಸಿದ ಇಲಾಖಾಧಿಕಾರಿಗಳು ದುರಸ್ತಿಗೊಳಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

error: Content is protected !!