ಹಾರಂಗಿ ಮತ್ತು ಚಿಕ್ಲಿಹೊಳೆ ಜಲಾಶಯದ ಕಚೇರಿ ದುರಸ್ತಿಗೆ ಶಾಸಕ ಅಪ್ಪಚ್ಚು ರಂಜನ್ ಸೂಚನೆ
14/08/2020

ಮಡಿಕೇರಿ ಆ. 14 : ಕಾವೇರಿ ನೀರಾವರಿ ನಿಗಮದ ಅಧೀನದ ಹಾರಂಗಿ ನೀರಾವರಿ ಇಲಾಖೆಗೆ ಸೇರಿದ ಹಾರಂಗಿ ಮತ್ತು ಚಿಕ್ಲಿಹೊಳೆ ಜಲಾಶಯದ ಕಚೇರಿಗಳು ಪಾಳುಬಿದ್ದಿರುವ ಕಟ್ಟಗಳನ್ನು ದುರಸ್ತಿ ಮಾಡಲು ಅದರ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಗಿಸಲು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸೂಚನೆ ನೀಡಿದ್ದಾರೆ.
ಹಾರಂಗಿ ಮತ್ತು ಚಿಕ್ಲಿಹೊಳೆ ಜಲಾಶಯ ವ್ಯಾಪ್ತಿಯ ಅನೇಕ ಕಚೇರಿಗಳು ಬೀಳುವ ಹಂತವನ್ನು ತಲುಪಿದ್ದು, ಈ ಭಾಗಗಳಿಗೆ ಶಾಸಕರು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಿಕ್ಲಿಹೊಳೆ ಜಲಾಶಯಕ್ಕೆ ಹೊಂದಿರುವ ಹತ್ತು ಕಚೇರಿಗಳು ಪಾಳುಬಿದ್ದು, ಹಾಳಾಗುವ ಬದಲು ಅವುಗಳನ್ನು ದುರಸ್ತಿ ಮಾಡಿ ಸರಕಾರಿ ನೌಕರರಿಗೆ ಬಾಡಿಗೆ ರೂಪದಲ್ಲಿ ನೀಡಬಹುದಾಗಿದೆ. ಇದರಿಂದ ಈ ವ್ಯಾಪ್ತಿಯ ಸರಕಾರಿ ನೌಕರರಿಗೆ ಅನುಕೂಲವಾಗುವುದು. ಈಗಾಗಲೇ ಇಲ್ಲಿನ ಕಚೇರಿಗಳು ಕುಶಾಲನಗರ ಮತ್ತು ಹಾರಂಗಿಯಲ್ಲಿ ಇರುವುದರಿಂದ ದುರಸ್ತಿ ಕ್ರಿಯಾ ಯೋಜನೆ ತಯಾರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
