ಕೊಡಗಿನ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

14/08/2020

ಮಡಿಕೇರಿ ಆ. 14 : ಕೊಡಗಿನಲ್ಲಿ ಸೇವೆ ಸಲ್ಲಿಸುತ್ತಿರುವ ಇಬ್ಬರು ಪೊಲೀಸ್ ಅಧಿಕಾರಿಗಳು 2020ರ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಕೊಡ ಮಾಡುವ ‘ರಾಷ್ಟ್ರಪತಿಗಳ ಪೊಲೀಸ್ ಪದಕ’ಕ್ಕೆ ಭಾಜನರಾಗಿದ್ದಾರೆ.

ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್‍ಪಿ ಹೆಚ್.ಎಂ. ಶೈಲೇಂದ್ರ ಮತ್ತು ಮಡಿಕೆÉೀರಿ ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕರಾದ ಸಿ.ಎನ್. ದಿವಾಕರ್ ಅವರು ರಾಷ್ಟ್ರಪತಿ ಪದಕವನ್ನು ಪಡೆಯುವ ಮೂಲಕ ಕೊಡಗಿನ ಹಿರಿಮೆಯನ್ನು ಹೆಚ್ಚಿಸಿದ್ದಾರೆ.

ಪೊಲೀಸ್ ಸೇವಾವಧಿಯಲ್ಲಿನ ಪ್ರಶಂಸನೀಯವಾದ ಕಾರ್ಯಚಟುವಟಿಕೆಗಳ ಹಿನ್ನೆಲೆಯಲ್ಲಿ ಶೈಲೇಂದ್ರ ಮತ್ತು ದಿವಾಕರ್ ಅವರು ರಾಷ್ಟ್ರಪತಿಗಳ ಪದಕದ ಗೌರವವನ್ನು ಪಡೆಯುತ್ತಿದ್ದಾರೆ. ರಾಜ್ಯದ 19 ಮಂದಿ ಪೊಲೀಸ್ ಸಿಬ್ಬಂದಿಗಳು ಈ ಗೌರವಕ್ಕೆ ಪಾತ್ರರಾಗಿದ್ದು, ಇವರಲ್ಲಿ ಇಬ್ಬರು ಕೊಡಗಿನವರಾಗಿದ್ದಾರೆ.